ಕಾಪಿ ಚೀಟಿಯನ್ನು ಲವ್ ಲೆಟರ್ ಎಂದು ಭಾವಿಸಿ ಬಾಲಕನ ಕೊಲೆ..!
ಪಾಟ್ನಾ; ವಿದ್ಯಾರ್ಥಿನಿ ಕಾಪಿ ಚೀಟಿ ಕೊಟ್ಟಿದ್ದನ್ನೇ ತಪ್ಪಾಗಿ ಅರ್ಥೈಸಿಕೊಂಡು ವಿದ್ಯಾರ್ಥಿನಿಯ ಸಹೋದರರು ಬಾಲಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬಿಹಾರದ ಭೋಜ್ಪುರದಲ್ಲಿ ನಡೆದಿದೆ.
ದಯಾ ಕುಮಾರ್ ಎಂಬಾತ ಐದನೇ ತರಗತಿ ಓದುತ್ತಿದ್ದ. ಆತನ ಸಹೋದರಿ ಆರನೇ ತರಗತಿಯಲ್ಲಿ ಓದುತ್ತಿದ್ದಳು. ಇಬ್ಬರಿಗೂ ಪರೀಕ್ಷೆ ಇತ್ತು. ಪರೀಕ್ಷೆ ಶುರುವಾಗುತ್ತಿದ್ದಂತೆ ದಯಾ ಕುಮಾರ್ ತನ್ನ ಸಹೋದರಿಗೆ ಸಹಾಯ ಮಾಡಲು ಹೋಗಿದ್ದಾನೆ. ಕಾಪಿ ಚೀಟಿಯನ್ನು ಬರೆದು ಸಹೋದರಿಯ ಕಡೆಗೆ ಎಸೆದಿದ್ದಾನೆ. ಆದ್ರೆ ಆ ಚೀಟಿ ಬೇರೆ ವಿದ್ಯಾರ್ಥಿನಿಯ ಬಳಿ ಬಿದ್ದಿದೆ. ಆ ವಿದ್ಯಾರ್ಥಿನಿ ಅದನ್ನು ಲವ್ ಲೆಟರ್ ಎಂದು ಭಾವಿಸಿ ಆಕೆಯ ಸಹೋದರರಿಗೆ ದೂರು ಹೇಳಿದ್ದಾರೆ.
ಕುಪಿತಗೊಂಡ ವಿದ್ಯಾರ್ಥಿನಿಯ ಸಹೋದರರು ಶಾಲೆಯ ಬಳಿ ಬಂದು ದಯಾ ಕುಮಾರ್ನನ್ನುಯ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಆತನನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಇದಾದ ನಾಲ್ಕು ದಿನದ ನಂತರ ದಯಾ ಕುಮಾರ್ ದೇಹ ರೈಲ್ವೆ ಹಳಿಯಲ್ಲಿ ಪೀಸ್ ಪೀಸ್ ಆದ ರೀತಿಯಲ್ಲಿ ಸಿಕ್ಕಿದೆ.