ರಾಹುಲ್ ಗಾಂಧಿ ಜೊತೆ ಡೇಟ್ ಮಾಡಬೇಕು ಎಂದಿದ್ದ ನಟಿ ಕರೀನಾ ಕಪೂರ್!
ನವದೆಹಲಿ; ಬಾಲಿವುಡ್ ನಟಿ ಕರೀನಾ ಕಪೂರ್ ಅವರು ಸೈಫ್ ಅಲಿಖಾನ್ ಜೊತೆ ಮದುವೆಯಾಗಿ ಖುಷಿಯಿಂದ ಸಂಸಾರ ನಡೆಸುತ್ತಿದ್ದಾರೆ.. ಈ ಸಂದರ್ಭದಲ್ಲಿ ಹಳೆಯ ಒಂದು ವಿಡಿಯೋ ಇಗ ವೈರಲ್ ಆಗುತ್ತಿದೆ.. ರಿಯಾಲಿಟಿ ಶೋ ಒಂದರಲ್ಲಿ ನಟಿ ಕರೀನಾ ಕಪೂರ್ ಅವರು ನೀಡಿದ್ದ ಹೇಳಿಕೆ ಅದು.. ಸಿಮಿ ನಡೆಸಿಕೊಡುವ ಟಾಕ್‌ಶೋನಲ್ಲಿ ದಶಕದ ಹಿಂದೆ ಭಾಗಿಯಾಗಿದ್ದ ಕರೀನಾ ಕಪೂರ್‌ಗೆ ಪ್ರಶ್ನೆಯೊಂದ ಎದುರಾಗಿತ್ತು.. ಯಾರ ಜೊತೆ ನೀವು ಡೇಟ್ ಮಾಡೋದಕ್ಕೆ ಇಷ್ಟಪಡುತ್ತೀರಿ ಎಂದು ಪ್ರಶ್ನೆ ಕೇಳಲಾಗಿತ್ತು.. ಇದಕ್ಕೆ ಉತ್ತರಿಸಿದ್ದ ಕರೀನಾ ಕಪೂರ್, ನಾನು ರಾಹುಲ್ ಗಾಂಧಿ ಜೊತೆ ಡೇಟ್ ಮಾಡಲು ಇಷ್ಟಪಡುತ್ತೀನಿ ಎಂದು ಹೇಳಿದ್ದರು..
ಇದನ್ನೂ ಓದಿ; ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ; 50ಕ್ಕೂ ಹೆಚ್ಚು ಮಂದಿ ನಾಪತ್ತೆ!
ಇದು ಇತ್ತೀಚಿನ ಸಂದರ್ಶನವಲ್ಲ.. ಜಬ್ ವಿ ಮೆಟ್ ಚಿತ್ರದ ಪ್ರಚಾರದ ವೇಳೆ ನೀಡಿದ್ದ ಸಂದರ್ಶನ.. ಅಂದು ಈ ಪ್ರಶ್ನೆ ಕೇಳಿದಾಗ, ಕರೀನಾ ಅವರು ರಾಹುಲ್ ಗಾಂಧಿ ಹೆಸರೇನೋ ಹೇಳಿದ್ದರು.. ಆದ್ರೆ, ನಂತರ ಆ ವ್ಯಕ್ತಿ ಹೆಸರು ಹೇಳಿದರೆ ವಿವಾದ ಆಗಬಹುದೇನೋ ಎಂಬ ಭಯ ಕೂಡಾ ವ್ಯಕ್ತಪಡಿಸಿದ್ದಾರೆ.. ಅಂದೆಂದೋ ನೀಡಿದ್ದ ಹೇಳಿಕೆ ಈಗ ವೈರಲ್ ಆಗುತ್ತಿದೆ..
ಇದನ್ನೂ ಓದಿ; ಪಾದಯಾತ್ರೆಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್!; ಮುರಿದುಬೀಳುತ್ತಾ ಜೆಡಿಎಸ್ ಮೈತ್ರಿ..?