Politics

ಗುಜರಾತ್‌ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್‌; ಡಿ.01 ಮತ್ತು ಡಿ.05ಕ್ಕೆ ಮತದಾನ

ನವದೆಹಲಿ; ಗುಜರಾತ್‌ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಮುಹೂರ್ತ ಫಿಕ್ಸ್‌ ಮಾಡಿದೆ. ಇಂದು ಚುನಾವಣಾ ವೇಳಾ ಪಟ್ಟಿ ಪ್ರಕಟ ಮಾಡಲಾಗಿದ್ದು, ಎರಡು ಹಂತಗಳಲ್ಲಿ ಚುನಾವಣೆ ನಡೆಸಲು ನಿರ್ಧಾರ ಮಾಡಲಾಗಿದೆ.

ಗುಜರಾತ್‌ ವಿಧಾನಸಭೆ 182 ಸದಸ್ಯ ಬಲ ಹೊಂದಿದ್ದು, ಡಿಸೆಂಬರ್‌ 01, ಡಿಸೆಂಬರ್‌ 05 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ 89 ಕ್ಷೇತ್ರಗಳಿಗೆ ಮತದಾನ ನಡೆದರೆ, ಎರಡನೇ ಹಂತದಲ್ಲಿ 93 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಡಿಸೆಂಬರ್‌ 8 ರಂದು ಎಲ್ಲಾ ಕ್ಷೇತ್ರಗಳ ಫಲಿತಾಂಶ ಹೊರಬೀಳಲಿದೆ.

ಗುಜರಾತ್ ಚುನಾವಣೆ ವೇಳಾಪಟ್ಟಿ;

ನಾಮಪತ್ರ ಸಲ್ಲಿಕೆಗೆ ಅಂತಿಮ ದಿನಾಂಕ:
ಮೊದಲ ಹಂತ: ನವೆಂಬರ್ 14
ಎರಡನೇ ಹಂತ: ನವೆಂಬರ್ 17

ನಾಮಪತ್ರ ಪರಿಶೀಲನೆ:
ಮೊದಲ ಹಂತ: ನವೆಂಬರ್ 15
ಎರಡನೇ ಹಂತ: ನವೆಂಬರ್ 18

ಹಿಂಪಡೆಯುವ ದಿನಾಂಕ:
ಮೊದಲ ಹಂತ: ನವೆಂಬರ್ 17
ಎರಡನೇ ಹಂತ: ನವೆಂಬರ್ 21

ಮತದಾನ:
ಮೊದಲ ಹಂತ: ಡಿಸೆಂಬರ್ 1 (ಗುರುವಾರ)
ಎರಡನೇ ಹಂತ: ಡಿಸೆಂಬರ್ 5 (ಸೋಮವಾರ)

ಮತ ಎಣಿಕೆ; ಡಿಸೆಂಬರ್ 8 (ಗುರುವಾರ)

Share Post