ನಟಿ ಸಮಂತಾಗೆ ಅನಾರೋಗ್ಯ: ಹೈದರಾಬಾದ್ ಮನೆಯಲ್ಲಿ ಚಿಕಿತ್ಸೆ
ಹೈದರಾಬಾದ್: ನಾಗಚೈತನ್ಯ ಜತೆ ವಿವಾಹ ವಿಚ್ಛೇದನದ ಬಳಿಕ ನಟಿ ಸಮಂತಾ ಶೂಟಿಂಗ್‌ನಲ್ಲಿ ಫುಲ್ ಬ್ಯುಸಿಯಾಗಿದ್ದರು. ಇದೀಗ ಶೂಟಿಂಗ್ ವೇಳೆ ಚಳಿ, ಜ್ವರ ಕಾಣಿಸಿಕೊಂಡಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಮನೆಯಲ್ಲಿಯೇ ನಟಿ ಸಮಂತಾ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.
ಸಿನಿಮಾವೊಂದರ ಚಿತ್ರೀಕರಣಕ್ಕೆಂದು ನಟಿ ಸಮಂತಾ ಇತ್ತೀಚೆಗೆ ಕಡಪಾಗೆ ತೆರಳಿದ್ದರು. ಕಡಪಾ ಚಿತ್ರೀಕರಣ ಶೆಡ್ಯೂಲ್ ಮುಗಿದ ಬಳಕ ಹೈದರಾಬಾದ್‌ಗೆ ವಾಪಸ್ಸಾಗಿದ್ದರು. ಇಂದು ಬೆಳಗ್ಗೆ ಹೈದರಾಬಾದ್‌ಗೆ ವಾಪಸ್ಸಾಗಿದ್ದ ಸಮಂತಾಗೆ ತೀವ್ರ ಚಳಿ ಜ್ವರ ಕಾಡಿದೆ. ಹೀಗಾಗಿ ವೈದ್ಯರನ್ನು ಮನೆಗೇ ಕರೆಸಿ ಚಿಕಿತ್ಸೆ ಪಡೆದಿದ್ದಾರೆ. ವೈದ್ಯರು ರೆಸ್ಟ್ ತೆಗೆದುಕೊಳ್ಳಲು ಹೇಳಿದ್ದಾರೆಂದು ತಿಳಿದುಬಂದಿದೆ.