Sports

ಅಭ್ಯಾಸಕ್ಕೆ ಗೈರಾದ ವಿರಾಟ್‌ ಕೊಹ್ಲಿ

ಮುಂಬೈ : ದ.ಆಫ್ರಿಕಾ ಪ್ರವಾಸಕ್ಕೆ ಭಾರತ ಕ್ರಿಕೆಟ್ ತಂಡ‌ ತಯಾರಿಯಲ್ಲಿದೆ.  ಬಿಸಿಸಿಐ ಆದೇಶದಂತೆ ಎಲ್ಲಾ ಆಟಗಾರರು ಮೂರು ದಿನಗಳ ಅಭ್ಯಾಸ ಶಿಬಿರಕ್ಕೆ ಹಾಜರಾಗಿದ್ದಾರೆ. ಆದರೆ ವಿರಾಟ್‌ ಕೊಹ್ಲಿ ಮಾತ್ರ ಗೈರಾಗಿದ್ದಾರೆ.

ವಿರಾಟ್‌ ಅವರನ್ನು ಏಕದಿನ ಕ್ರಿಕೆಟ್‌ ನಾಯಕತ್ವದಿಂದ ಬಿಸಿಸಿಐ ಒತ್ತಾಯವಾಗಿ ಕೆಳಗಿಳಿಸಿತ್ತು. ಈಗ ಅವರು ಅಭ್ಯಾಸಕ್ಕೆ ಬಾರದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಬಿಸಿಸಿಐ ಅಧಿಕಾರಿಗಳು ವಿರಾಟ್ ಕೊಹ್ಲಿಯನ್ನು ಸಂಪರ್ಕಿಸಲು ಪ್ರಯತ್ನ ಪಟ್ಟರು. ಕೊಹ್ಲಿ ಫೋನ್ ಕರೆ ಸ್ವೀಕರಿಸುತ್ತಿಲ್ಲ ಎಂದು ವರದಿಯಾಗಿದೆ.

Share Post