Technology

SMART ಉಡಾವಣೆ ಯಶಸ್ವಿ: DRDO

ಒಡಿಸ್ಸಾ: ಬಹುದೂರದಲ್ಲಿರುವ ಗುರಿಯನ್ನು ಛೇದಿಸಬಲ್ಲ Supersonic missile assisted torpedo (SMART) ಅನ್ನು ಡಿಆರ್‌ಡಿಒ ಸಂಸ್ಥೆ ಯಶಸ್ವಿಯಾಗಿ ಉಡಾವಣೆ ಮಾಡಿದೆ.

Anti submarine warfare ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವುದನ್ನು ಗುರಿಯಾಗಿಸಿಕೊಂಡು ಈ ಸ್ಮಾರ್ಟ್‌ ಮಿಸೈಲ್‌ ಅನ್ನು ಡಿಸೈನ್‌ ಮಾಡಲಾಗಿದೆ ಎಂದು ಡಿಆರ್‌ಡಿಒ ತಿಳಿಸಿದೆ. ಈ ಡಬ್ಬಿ ಆಧಾರಿತ ಕ್ಷಿಪಣಿಯು 2ಹಂತದ ಘನ ಪ್ರೊಪಲ್ಷನ್, ಎಲೆಕ್ಟ್ರೋ-ಮೆಕ್ಯಾನಿಕಲ್ ಆಕ್ಯೂವೇಟರ್‌ ಮತ್ತು ನಿಖರವಾದ ಜಡತ್ವ ನ್ಯಾವಿಗೇಶನ್‌ನಂತಹ ಸುಧಾರಿತ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಈ ಕ್ಷಿಪಣಿಯನ್ನು ಗ್ರೌಂಡ್‌ ಮೊಬೈಲ್‌ ಲಾಂಚರ್‌ನಿಂದ ಉಡಾವಣೆ ಮಾಡಲಾಗುತ್ತದೆ. DRDO ಪ್ರಯೋಗಾಲಯ ಸಂಸ್ಥೆ ಈ ಸುಧಾರಿತ ಕ್ಷಿಪಣಿ ವ್ಯವಸ್ಥೆಗಾಗಿ ವಿವಿಧ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿವೆ. ವಿಜ್ಞಾನಿಗಳ ಪ್ರಕಾರ, ಭಾರತೀಯ ನೌಕಾಪಡೆಯ ಬಳಕೆಗಾಗಿ ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಾಗಿದೆ ಎನ್ನಲಾಗುತ್ತಿದೆ.

 

 

 

Share Post