CinemaNational

ದಶಕಗಳ ನಂತರ ತನ್ನ ಮಾಜಿ ಪತ್ನಿ ರೇಣು ದೇಸಾಯಿ ಭೇಟಿ ಮಾಡಿದ ಪವನ್‌ ಕಲ್ಯಾಣ್‌

ಹೈದರಾಬಾದ್‌; ಟಾಲಿವುಡ್‌ ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ಗೆ ಇರುವ ಕ್ರೇಜ್‌ ಎಲ್ಲರಿಗೂ ಗೊತ್ತಿರುವುದೇ. ಪ್ರಸ್ತು ಅವರು ಒಂದು ಕಡೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೊಂದೆಡೆ ರಾಜಕೀಯದಲ್ಲೂ ಹೆಚ್ಚು ಸಕ್ರಿಯವಾಗುತ್ತಿದ್ದಾರೆ. ಈ ನಡುವೆ ಅವರು ಇಂಟರ್‌ ನ್ಯಾಷನಲ್‌ ಶಾಲೆಯೊಂದರ ಗ್ರ್ಯಾಜುಯೇಷನ್‌ ಫಂಕ್ಷನ್‌ ನಲ್ಲಿ ಪವನ್‌ ಕಲ್ಯಾಣ್‌ ಭಾಗಿಯಾಗಿರುವುದು ಇದೀಗ ವೈರಲ್‌ ಆಗುತ್ತಿದೆ. ಅದಕ್ಕೆ ಕಾರಣ ಪವನ್‌ ಕಲ್ಯಾಣ್‌ ಪುತ್ರ ಅಕಿರಾ ನಂದನ್‌.

 

ಪವನ್‌ ಕಲ್ಯಾಣ್‌ ಅವರು ದಶಕದ ಹಿಂದೆಯೇ ನಟಿ ರೇಣು ದೇಸಾಯಿಗೆ ವಿಚ್ಛೇದನ ನೀಡಿದ್ದಾರೆ.  ವಿಚ್ಛೇದನದ ನಂತರ ತಮ್ಮ ಮಕ್ಕಳಾದ ಅಕಿರಾ ನಂದನ್‌ ಹಾಗೂ ಆದ್ಯ ಇಬ್ಬರೂ ರೇಣು ದೇಸಾಯಿ ಬಳಿಯೇ ಬೆಳೆಯುತ್ತಿದ್ದಾರೆ. ಆದರೂ ಪವನ್‌ ಕಲ್ಯಾಣ್‌ ಇಬ್ಬರು ಮಕ್ಕಳ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ.  ಅವರಿಗೆ ಬೇಕಾದವನ್ನು ಕೊಡಿಸುವುದು, ಮಕ್ಕಳನ್ನು ಭೇಟಿ ಮಾಡುವುದು ಮಾಡುತ್ತಿರುತ್ತಾರೆ. ಮಕ್ಕಳನ್ನು ಸಾಕಷ್ಟು ಬಾರಿ ಭೇಟಿಯಾಗಿದ್ದರೂ, ಮಾಜಿ ಪತ್ನಿ ರೇಣು ದೇಸಾಯಿರನ್ನು ಪವನ್‌ ಕಲ್ಯಾಣ್‌ ಭೇಟಿಯಾಗಿರಲಿಲ್ಲ. ಆ ಕುರಿತ ಒಂದು ಫೋಟೋ ಕೂಡಾ ಇರಲಿಲ್ಲ.

 

ಆದ್ರೆ, ವಿಚ್ಛೇದನ ಪಡೆದ ನಂತರ ರೇಣು ದೇಸಾಯಿ ಹಾಗೂ ಪವನ್‌ ಕಲ್ಯಾಣ್‌ ಮೊದಲ ಬಾರಿಗೆ ಭೇಟಿಯಾಗಿದ್ದಾರೆ. ಅಕಿರಾ ನಂದನ್‌ ಓದುತ್ತಿರುವ ಶಾಲೆಯ ಗ್ರ್ಯಾಜುಯೇಷನ್‌ ಸಮಾರಂಭದಲ್ಲಿ ಪವನ್‌ ಕಲ್ಯಾಣ್‌ ಹಾಗೂ ರೇಣು ದೇಸಾಯಿ ಇಬ್ಬರೂ ಪಾಲ್ಗೊಂಡಿದ್ದರು. ಮಕ್ಕಳ ಜೊತೆ ನಿಂತು ಇಬ್ಬರೂ ಸೆಲ್ಫಿ ಕೂಡಾ ತೆಗೆದುಕೊಂಡಿದ್ದಾರೆ. ಆ ಫೋಟೋವನ್ನು ರೇಣು ದೇಸಾಯಿ ಅವರೇ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Share Post