ದೇವಿಶ್ರೀ ಪ್ರಸಾದ್ ವಿರುದ್ಧ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲು
ಹೈದರಾಬಾದ್; ಹಾಡೊಂದರಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ ಎಂದು ಆರೋಪಿಸಿ ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ವಿರುದ್ಧ ಹೈದರಾಬಾದ್‌ನಲ್ಲಿ ದೂರು ದಾಖಲಿಸಲಾಗಿದೆ. ಓ ಪರಿ ಎನ್ನುವ ಹಾಡೊಂದು ಹಲವು ಭಾಷೆಗಳಲ್ಲಿ ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾಗಿತ್ತು. ಅರೆಬರೆ ಬಟ್ಟೆ ಧರಿಸಿ ಧಾರ್ಮಿಕ ಪಠಣಗಳಿರುವ ಈ ಹಾಡಿಗೆ ಕುಣಿಯಲಾಗಿದೆ ಎಂದು ಆರೋಪಿಸಲಾಗಿದೆ.
ನಟಿ ಕರಾಟೆ ಕಲ್ಯಾಣ ಹಾಗೂ ಲಲಿತ್ ಕುಮಾರ್ ಎಂಬುವವರು ಹೈದರಾಬಾದ್ ಸೈಬ ರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಐಪಿಸಿ ಸೆಕ್ಷನ್ 153 (ಎ) ಹಾಗೂ 295 (ಎ) ಅಡಿ ಕೇಸ್ ದಾಖಲಿಸಿದ್ದಾರೆ.