Cinema

A R Rehman ಇಂದು 55ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಮುಂಬೈ : ಸಂಗೀತ ಲೋಕದ ಮಾಂತ್ರಿಕ, ಗಾಯಕ, ಸಾಹಿತಿ A R Rehman  ಅವರು ತಮ್ಮ 55ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ತಮಿಳು, ತೆಲುಗು, ಹಿಂದಿ ಚಿತ್ರೋದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿರುವ ಎ ಆರ್‌ ರೆಹಮಾನ್‌ ಅವರ ಸಂಗೀತ ಗುರು ಮಾಸ್ಟರ್‌ ಧನರಾಜ್.‌

1992 ರಲ್ಲಿ ಮಣಿರತ್ನಂ ಅವರ ರೋಜಾ ಸಿನಿಮಾಗೆ ಮೊದಲ ಬಾರಿ ಸಂಗೀತ ಸಂಯೋಜಿಸಿದ ಎ ಆರ್‌ ರೆಹಮಾನ್‌ ನಂತರ ಹಿಂತಿರುಗಿ ನೋಡಲೇ ಇಲ್ಲ. ಮೊದಲ ಚಿತ್ರಕ್ಕೆ ಫಿಲ್ಮ್‌ ಫೇರ್‌ ಪ್ರಶಸ್ತಿ ಪಡೆದಿದ್ದರು ರೆಹಮಾನ್‌.

ರೆಹಮಾನ್‌ ಅವರಿಗೆ ಸರ್ಕಾರ ಪದ್ಮಶ್ರೀ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳು ಲಭಿಸಿವೆ. ರೆಹಮಾನ್‌ ಅವರ ಕಂಪೋಸಿಂಗ್‌ ಅಲ್ಲಿ ಬಂದ ವಂದೇ ಮಾತರಂ ಇವತ್ತಿಗೂ ಎವರ್‌ ಗ್ರೀನ್‌ ದೇಶ ಭಕ್ತಿ ಗೀತೆ ಎನಿಸಿಕೊಂಡಿದೆ.

ಸಾಕಷ್ಟು ಫಿಲ್ಮ ಫೇರ್‌, ರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಎ ಆರ್‌ ರೆಹಮಾನ್‌ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳನ್ನು ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ರೆಹಮಾನ್‌ ಅವರಿಗೆ ಶುಭಾಷಯ ಕೋರಿದ್ದಾರೆ.

Share Post