Cinema

ಈ ಫೋಟೋಗಾಗಿ 36 ವರ್ಷ ಕಾದಿದ್ದೀನಿ : ಸುದೀಪ್‌

ಬೆಂಗಳೂರು : ಕಿಚ್ಚ ಸುದೀಪ್‌ ತಮ್ಮ ೩೬ ವರ್ಷದ ಕನಸ್ಸನ್ನು ಈಡೇರಿಸಿಕೊಂಡಿದ್ದಾರೆ. ಕ್ರಿಕೆಟ್‌ ಅಭಿಮಾನಿಯಾಗಿರುವ ಸುದೀಪ್‌ ಕಪಿಲ್‌ ಅವರ ಫ್ಯಾನ್‌ ಕೂಡ. ನೆನ್ನೆ ಇತ್ತೀಚಿನ ಪ್ರೆಸ್‌ ಮೀಟ್‌ ಅಲ್ಲಿ ಕಪಿಲ್‌ ದೇವ್‌ ಅವರನ್ನು ಭೇಟಿ ಮಾಡಿದ ಸುದೀಪ್‌ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.

kiccha sudeep and kapil dev photo

ಈ ಮುಂಚೆ ನಾನು ೮೭-೮೮ರ ಸಮಯದಲ್ಲಿ ಕಪಿಲ್‌ ಅವರನ್ನು ಭೇಟಿ ಮಾಡಿ ಫೋಟೋ ಕೇಳಿದ್ದೆ. ಆಗ ಕ್ಯಾಮರಾ ವರ್ಕ್‌ ಆಗಿರಲಿಲ್ಲ. ಈಗ ನನಗೆ ಆ ಭಾಗ್ಯ ಸಿಕ್ಕಿದೆ ಎಂದು ತಿಳಿಸಿದ್ದಾರೆ.

1983 ಸಿನಿಮಾದ ಕನ್ನಡದ ಡಿಸ್ಟ್ರಿಬ್ಯೂಷನ್‌ ಮಾಡುತ್ತಿರುವ ಸುದೀಪ್‌ ಪತ್ರಿಕಾಘೋಷ್ಠಿಯಲ್ಲಿ ಭಾಗಿಯಾಗಿ ತಮ್ಮ ನುಡಿಗಳನ್ನು ಹಂಚಿಕೊಂಡರು. ಸೋಷಿಯಲ್‌ ಮೀಡಿಯಾದಲ್ಲಿ ಕಪಿಲ್‌ ಅವರೊಟ್ಟಿಗಿನ ಫೋಟೋ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

 

 

ಇದನ್ನು ಓದಿ : ರಕ್ಕಸ ಚಂಡಮಾರುತ ʼರೈʼ ಗೆ 208 ಬಲಿ

Share Post