Cinema

LOVE MOCKTAIL 2 ಚಿತ್ರದ ರಿಲೀಸ್‌ ಡೇಟ್‌ ಇಂದು ಘೋಷಣೆ

ಬೆಂಗಳೂರು : ವರ್ಷದ ಹಿಂದೆ ರಿಲೀಸ್‌ ಆದ ಲವ್‌ ಮಾಕ್ಟೇಕ್‌ ಕನ್ನಡ ಸಿನಿಮಾ ಸಖತ್‌ ಸೌಂಡ್‌ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅದರ ಸೀಕ್ವೆಲ್‌ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಇದೀಗ ಲವ್‌ ಮಾಕ್ಟೇಲ್‌ ೨ ಸಿನಿಮಾ ಚಿತ್ರೀಕರಣ ಮುಗಿದಿದ್ದು ರಿಲೀಸ್‌ಗೆ ಸಿದ್ಧವಾಗಿದೆ. ಇಂದು ಚಿತ್ರದ ರಿಲೀಸ್‌ ಡೇಟ್‌ ಘೋಷಣೆ ಮಾಡುವುದಾಗಿ ಮಿಲನ ನಾಗರಾಜ್‌ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಲವ್‌ ಮಾಕ್ಟೇಲ್‌ ಸಿನಿಮಾ ಚಿತ್ರ ರಸಿಕರನ್ನು ರಂಜಿಸಿತ್ತು. ಹೀಗಾಗಿ ಇದರ ಸೀಕ್ವೆಲ್‌ ಬಗ್ಗೆಯೂ ಸಾಕಷ್ಟು ನಿರೀಕ್ಷೆಗಳಿವೆ. ಹೀಗಾಗಿಯೇ ಮಿಲನ ನಾಗರಾಜ್‌, ಇನ್ಸ್ಟಾಗ್ರಾಂ ಪೋಸ್ಟ್‌ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಮಿಲನಾ ನಾಗರಾಜ್‌ ನಿ ಗೆಸ್ಸಸ್‌ ಎಂದು ಅಭಿಮಾನಿಗಳನ್ನೇ ಪ್ರಶ್ನಿಸಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿ ಇದ್ದರೂ ಲವ್‌ ಮಾಕ್ಟೇಲ್‌ ಸೀಕ್ವೆಲ್‌ ಸಿನಿಮಾದ ಕೆಲಸ ಮುಗಿಸಿರುವ ತಂಡ ಸದ್ಯದಲ್ಲೇ ತೆರೆ ಮೇಲೆ ಬರಲಿದೆ.

Share Post