National

ಐದು ಖೈದಿಗಳು ಸಾಮೂಹಿಕ ಆತ್ಮಹತ್ಯೆಗೆ ಯತ್ನ: ತಿಹಾರ್‌ ಜೈಲಲ್ಲಿ ಆಘಾತಕಾರಿ ಘಟನೆ

ನವದೆಹಲಿ: ಶಿಕ್ಷೆ ಅನುಭವಿಸುತ್ತಿರುವ  ಐವರು ಖೈದಿಗಳು ನೇಣುಬಿಗಿದುಕೊಂಡು ಸಾಮೂಹಿಕವಾಗಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದೆಹಲಿ ತಿಹಾರ್‌ ಜೈಲಿನಲ್ಲಿ ನಡೆದಿದೆ. ಜನವರಿ ಮೂರರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

   ವಿವಿಧ ಕೇಸ್‌ಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಐವರು ಖೈದಿಗಳು ತಿಹಾರ್‌ ಜೈಲಿನ ಸಂಖ್ಯೆಯಲ್ಲಿ ಮೂರರಲ್ಲಿ ಇದ್ದರು. ಆದ್ರೆ ಅದು ಯಾವ ಕಾರಣಕ್ಕೋ ಏನೋ ಗೊತ್ತಿಲ್ಲ. ಐವರೂ ಒಟ್ಟಿಗೆ ಮಾತನಾಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನು ಜೈಲು ಸಿಬ್ಬಂದಿ ನೋಡಿಕೊಂಡಿದ್ದರಿಂದ ಐವರ ಪ್ರಾಣವೂ ಉಳಿಸಿದೆ. ಆದ್ರೆ ಒಬ್ಬ ಖೈದಿಯ ಪರಿಸ್ಥಿತಿ ಮಾತ್ರ ಕೊಂಚ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. ತೀವ್ರವಾಗಿ ಅಸ್ವಸ್ಥನಾಗಿರುವ ಖೈದಿಯನ್ನು ದೀನದಯಾಳ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉಳಿದ ಖೈದಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಐವರೂ ಮೊದಲಿಗೆ ಹರಿತವಾದ ವಸ್ತುಗಳಿಂದ ತಮ್ಮ ದೇಹವನ್ನು ಗಾಯಗೊಳಿಸಿಕೊಂಡಿದ್ದಾರೆ. ಇದ್ರಿಂದಾಗಿ ಸಾಕಷ್ಟು ರಕ್ತ ಹರಿದಿದೆ. ಆದ್ರೆ ಇದ್ರಿಂದ ಸಾಯವುದು ಕಷ್ಟ ಎಂದು ಅರಿತ ಅವರು, ತಮ್ಮ ಕೊಠಡಿಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಜೈಲು ಸಿಬ್ಬಂದಿ ಆ ದೃಶ್ಯವನ್ನು ನೋಡಿದ್ದಾರೆ. ಕೂಡಾ ಐವರನ್ನೂ ಕೆಳಗಿಳಿಸಿ, ಪ್ರಾಣ ಉಳಿಸಿದ್ದಾರೆ.

ಹೀಗೆ ಸಾಮೂಹಿಕ ಆತ್ಮಹತ್ಯೆಗೆ ಕಾರಣ ಏನು ಎಂಬುದು ಇನ್ನೂ ಗೊತ್ತಾಗಿಲ್ಲ. ಈ ಬಗ್ಗೆ ಹಿರಿಯ ಜೈಲು ಅಧಿಕಾರಿಗಳು ತನಿಖೆಗೆ ಆದೇಶ ನೀಡಿದ್ದಾರೆ. ತನಿಖೆಯ ನಂತರವಷ್ಟೇ ಕಾರಣ ತಿಳಿಯಲಿದೆ.

Share Post