National

ಜಮ್ಮು-ಕಾಶ್ಮೀರದಲ್ಲಿ ಭಾರಿ ಹಿಮಪಾತ; 4 ಅಡಿ ಹಿಮ ಶೇಖರಣೆ..!

ಜಮ್ಮು-ಕಾಶ್ಮೀರ: ಕಳೆದ ಎರಡು ದಿನಗಳಿಂದ ಜಮ್ಮು-ಕಾಶ್ಮೀರದಲ್ಲಿ ಭಾರಿ ಹಿಮಪಾತವಾಗುತ್ತಿದೆ. ರಸ್ತೆ, ಕಟ್ಟಡಗಳು, ವಾಹನಗಳ ಮೇಲೆ ಅಡಿಗಟ್ಟಲೆ ಹಿಮ ಶೇಖರಣೆಯಾಗುತ್ತಿದೆ. ಮನೆಗಳ ಮುಂಭಾಗದಲ್ಲೂ ಹಿಮ ಶೇಖರಣೆಯಾಗುತ್ತಿರುವುದರಿಂದ ಜನ ಓಡಾಡುವುದಕ್ಕೂ ಕಷ್ಟವಾಗುತ್ತಿದೆ. ಇನ್ನು ರಾಷ್ಟ್ರೀಯ ಹೆದ್ದಾರಿಗಳು, ಇತರೆ ರಸ್ತೆಗಳಲ್ಲೂ ಆರು ಇಂಚಿನಿಂದ ಮೂರು ಅಡಿಯವರೆಗೆ ಹಿಮ ಶೇಖರಣೆಯಾಗುತ್ತಿದೆ. ಹೀಗಾಗಿ ಅದನ್ನು ತೆಗೆಯುವುದಕ್ಕಾಗಿ ದಿನವೂ ಹರಸಾಹಪಡಬೇಕಾದ ಪರಿಸ್ಥಿತಿ ಏರ್ಪಟ್ಟಿದೆ. ಹಿಮಪಾತ ಹಾಗೂ ಭೂಕುಸಿತದ ಕಾರಣದಿಂದಾಗಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಎರಡು ದಿನ ಬಂದ್‌ ಮಾಡಲಾಗಿದೆ.

ಮನೆಗಳ ಬಳಿ ಜನರೇ ಹಿಮವನ್ನು ತೆಗೆದು ಓಡಾಡುವುದಕ್ಕೆ ಅವಕಾಶ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ, ವಾಹನಗಳನ್ನು ತೆಗೆಯೋದೇ ಅವರಿಗೆ ದೊಡ್ಡ ತಲೆನೋವಾಗಿದೆ. ಇನ್ನೊಂದೆಡೆ ಹೆದ್ದಾರಿಗಳು, ವಾಹನ ಓಡಾಡುವ ರಸ್ತೆಗಳಲ್ಲಿ ಜೆಸಿಬಿಗಳ ಮೂಲಕ ಹಿಮವನ್ನು ತೆರವುಗೊಳಿಸಲಾಗುತ್ತಿದೆ. ರಸ್ತೆಗಳಲ್ಲಿ ಹಿಮ ಆವರಿಸಿದ್ದರಿಂದ ವಾಹನಗಳ ಚಕ್ರಗಳು ಜಾರಿ ಅಪಘಾತಗಳಾದ ಘಟನೆಗಳೂ ಸಾಮಾನ್ಯವಾಗಿವೆ. ಇನ್ನು ಹಿಮಪಾತದಿಂದಾಗಿ ಕೆಲಕಡೆ ಭೂಕುಸಿತವೂ ಉಂಟಾಗಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಹಿಮಪಾತವಾಗಿದೆ..?

ಸೋನಮಾರ್ಗ್‌, ಬಾಲ್ತಲ್‌ : 2 ಅಡಿಯಿಂದ 2.5 ಅಡಿ

ಜೋಜಿಲ : 3 ಅಡಿ

ಗುಂಡ್‌: 1.2 ಅಡಿ

ಮಚಿಲ್‌ : 2 – 4 ಅಡಿ

ದಾವರ್‌: 2 – 4 ಅಡಿ

ಗುಲ್‌ಮಾರ್ಗ್‌ : 2 ಅಡಿ

Share Post