83 ಸಿನಿಮಾ ತೆರಿಗೆ ಮುಕ್ತ !
ಮುಂಬೈ : ರಣವೀರ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ, 1983ರ ವಿಶ್ವಕಪ್ ಘಟನಾವಳಿಗಳ ಆಧಾರಿತ 83 ಚಿತ್ರವನ್ನು ದೆಹಲಿ ಸರ್ಕಾರ ತೆರಿಗೆ ಮುಕ್ತಗೊಳಿಸಿದೆ. ಕಪಿಲ್ ದೇವ್ ಅವರ ನೇತೃತ್ವದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಹೋರಾಡಿ ಭಾರತ ತನ್ನ ಮೊದಲ ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿತ್ತು. ಈಗ ಇದನ್ನು ಸಿನಿಮಾ ಮಾಡಿರುವ ಕಬೀರ್ ಖಾನ್ ಇದೇ ಡಿಸೆಂಬರ್ ೨೪ಕ್ಕೆ ತೆರೆಗೆ ತರಲಿದ್ದಾರೆ.
ಭಾರತದ ವಿಶ್ವಕಪ್ ಆಧರಿಸಿದ ಸಿನಿಮಾ ಎಂಬ ಕಾರಣಕ್ಕೆ ದೆಹಲಿ ಸರ್ಕಾರ ತೆರಿಗೆ ಮುಕ್ತಗೊಳಿಸಿದೆ. ಯುವಕರಿಗೆ ಈ ಸಿನಿಮಾ ಸ್ಪೂರ್ತಿದಾಯಕವಾಗಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಪಂಚ ಭಾಷೆಗಳಲ್ಲಿ ತೆರೆ ಕಾಣುತ್ತಿರುವ ೮೩ ಸಿನಿಮಾದಲ್ಲಿ ತ್ರಿಪಾಟಿ, ತಾಹಿರ್ ರಾಜ್ ಭಾಸಿನ್, ಜೀವಾ, ಸಾಕಿಬ್ ಸಲೀಂ, ಜತಿನ್ ಸರ್ನಾ, ಚಿರಾಗ್ ಪಾಟೀಲ್, ದಿನಕರ್ ಶರ್ಮಾ, ನಿಶಾಂತ್ ದಹಿಯಾ ಹೀಗೆ ಹಲವರು ನಟಿಸಿದ್ದಾರೆ. ನಟಿ ದೀಪಿಕಾ ಪಡುಕೋಣೆ ವಿಶೇಷವಾಗಿ ಕಪಿಲ್ ಪತ್ನಿ ರೋಮಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.