Uncategorized

ಚಿಕ್ಕಬಳ್ಳಾಪುರದಲ್ಲಿ ಲಘು ಭೂಕಂಪನ; ಕೆಲ ಸೆಕೆಂಡ್‌ ಕಂಪಿಸಿದ ಭೂಮಿ

ಚಿಕ್ಕಬಳ್ಳಾಪುರ: ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಹತ್ತಿರವಿರುವ ಚಿಕ್ಕಬಳ್ಳಾಪುರ ನಗರ ಹಾಗೂ ಅದರ ಸುತ್ತಮುತ್ತ ಇಂದು ಬೆಳಗ್ಗೆ ಲಘು ಭೂಕಂಪನ ನಡೆದಿದೆ. ಇಂದು ಬೆಳಗ್ಗೆ 7 ಗಂಟೆ 10 ನಿಮಿಷದ ಸಮಯಕ್ಕೆ ಸರಿಯಾಗಿ ಕೆಲಕಾಲ ಭೂಮಿ ನಡುಗಿದೆ. ಕೆಲವರಿಗೆ ಮಾತ್ರ ಈ ಅನುಭವವಾಗಿದೆ.

   ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ ಈ ಸುದ್ದಿಯನ್ನು ದೃಢಪಡಿಸಿದೆ. ಬೆಳಗ್ಗೆ ನಡೆದ ಭೂಕಂಪನದ ತೀವ್ರತೆ 3.3 ರಷ್ಟಿತ್ತು ಎಂದು ತಿಳಿದುಬಂದಿದೆ. ಈ ಬಗ್ಗೆ ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ ಟ್ವೀಟ್‌ ಮಾಡಿ ಮಾಹಿತಿ ನೀಡಿದೆ.

Share Post