ಕೊರೊನಾ ಸೋಂಕಿನಿಂದ ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್ ಗುಣಮುಖ
ಹೈದರಾಬಾದ್: ತೆಲುಗು, ತಮಿಳು, ಮಲೆಯಾಳಂ ಸಿನಿಮಾ ರಂಗದಲ್ಲಿ ಹೆಸರು ಮಾಡಿರುವ ಮಹಾನಟಿ ಸಾವಿತ್ರಿ ಖ್ಯಾತಿಯ ನಟಿ ಕೀರ್ತಿ ಸುರೇಶ್ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಈ ಬಗ್ಗೆ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿಕೊಂಡಿರುವ ನಟಿ ʻಇತ್ತೀಚಿನ ದಿನಗಳಲ್ಲಿ ನೆಗೆಟಿವ್ ಎಂದರೆ ಧನಾತ್ಮಕ ಎಂಬ ವಿಚಾರವನ್ನು ಹೊರಸೂಸುತ್ತೆ. ನಿಮ್ಮೆಲ್ಲರ ಪ್ರೀತಿ ಮತ್ತು ಅಭಿಮಾನದಿಂದ ನಾನು ಕೃತಜ್ಞತೆ ಅರ್ಪಿಸುತ್ತಿದ್ದೇನೆ. ತುಂಬಾ ಸಂತೋಷದಿಂದ ಸಂಕ್ರಾಂತಿ(ಪೊಂಗಲ್) ಹಬ್ಬವನ್ನು ಆಚರಣೆ ಮಾಡಿದ್ದೀರಿ ಎಂದು ಭಾವಿಸಿದ್ದೇನೆʼ ಎಂದು ಟ್ವೀಟ್ ಮಾಡಿದ್ದಾರೆ.
ಜನವರಿ 11 ರಂದು ನಟಿಗೆ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಐಸೋಲೇಟ್ ಆಗಿ ವೈದ್ಯರ ಸೂಚನೆಗಳನ್ನು ಪಾಲಿಸಿದ್ದಾರೆ. ಈಗ ಸಂಪೂರ್ಣ ಗುಣಮುಖರಾಗಿದ್ದು, ಪುನಃ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡ್ತಿದೆ. ಹಾಗೆಯೇ ಎಲ್ಲರೂ ಕೊರೊನಾ ಲಸಿಕೆ ಪಡೆದು ಎಚ್ಚರಿಕೆಯಿ ದ ಇರುವಂತೆ ಸೂನಚೆ ಕೂ ಡ ಕೊಟ್ಟಿದ್ದಾರೆ.
ಸದ್ಯಕ್ಕೆ ಮೆಗಾಸ್ಟಾರ್ ಚಿರಂಜೀವಿ ನಟನೆಯ ʻಭೋಲಾ ಶಂಕರʼ ಸಿನಿಮಾದಲ್ಲಿ ನಟಿ ಬ್ಯಸಿಯಾಗಿದ್ದಾರೆ. ಮಹೇಶ್ ಬಾಬು ಜೊತೆಗೆ ನಟಿಸಿರುವ ಸರ್ಕಾರು ವಾರಿ ಪಾಟ ಎಂಬ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ.
'Negative' can mean a positive thing these days. Grateful for all your love and prayers, hope you had a lovely Pongal and Sankaranthi! ?❤️ pic.twitter.com/Sop5wPfBA1
— Keerthy Suresh (@KeerthyOfficial) January 18, 2022