BengaluruBusinessCrime

ಖಾಸಗಿ ವಿಡಿಯೋ ಲೀಕ್‌ ಮಾಡೋದಾಗಿ ಸುದೀಪ್‌ಗೆ ಬೆದರಿಕೆ ಪತ್ರ; ದೂರು ದಾಖಲು

ಬೆಂಗಳೂರು; ನಟ ಕಿಚ್ಚ ಸುದೀಪ್‌ಗೆ ಅನಾಮಿಕ ವ್ಯಕ್ತಿಯಿಂದ ಎರಡು ಬೆದರಿಕೆ ಪತ್ರಗಳು ಬಂದಿವೆ. ಅದರಲ್ಲಿ ತಮ್ಮ ಖಾಸಗಿ ವಿಡಿಯೋಗಳನ್ನು ಲೀಕ್‌ ಮಾಡೋದಾಗಿ ಸುದೀಪ್‌ಗೆ ಬೆದರಿಕೆ ಹಾಕಲಾಗಿದೆ. ಪತ್ರದಲ್ಲಿ ಸುದೀಪ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಎಂದು ತಿಳಿದುಬಂದಿದೆ. ಈ ಸಂಬಂದ ಪುಟ್ಟೇನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲು ಮಾಡಲಾಗಿದ್ದು, ಈ ಕೇಸ್‌ನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ.

ಐಪಿಸಿ ಸೆಕ್ಷನ್ 506, ಸೆಕ್ಷನ್ 504 ಅಡಿಯಲ್ಲಿ ಆರೋಪಿ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ. ಈ ಪತ್ರ ಎಲ್ಲಿಂದ ಬಂತು, ಯಾರು ಕಳುಹಿಸಿದ್ದು ಎನ್ನುವ ತನಿಖೆ ನಡೆಯುತ್ತಿದೆ.

Share Post