Bengaluru

ಜಯನಗರ ಕಾಂಪ್ಲೆಕ್ಸ್‌ ಸ್ವಚ್ಛತೆಗೆ 70 ಲಕ್ಷ ರೂ. ಟೆಂಡರ್‌

ಬೆಂಗಳೂರು;  ಬಿಬಿಎಂಪಿ ಅಧಿಕಾರಿಗಳು ಸಾರ್ವಜನಿಕರ ತೆರಿಗೆ ಹಣ ಎರ್ರಾಬಿರ್ರಿ ಪೋಲು ಮಾಡುತ್ತಿದ್ದಾರೆ ಎಂಬುದಕ್ಕೆ ಮತ್ತೊಂದು ಎಕ್ಸಾಂಪಲ್‌ ಸಿಕ್ಕಿದೆ. ಬಿಬಿಎಂಪಿ ಅಧಿಕಾರಿಗಳು ಜಯನಗರ ಕಾಂಪ್ಲೆಕ್ಸ್ ನಲ್ಲಿ ಕಸ ಗೂಡಿಸಲು ಹಾಗು ಶೌಚಾಲಯ ಸ್ವಚ್ಚಮಾಡಲು ಟೆಂಡರ್ ಕರೆದಿದ್ದಾರೆ. ಇದರ ಮೊತ್ತ ಎಷ್ಟು ಅಂತ ಕೇಳಿದರೆ ನಿಮಗೆ ಅಚ್ಚರಿಯಾಗುತ್ತೆ.

ಜಯನಗರ ಕಾಂಪ್ಲೆಕ್ಸ್ ನಲ್ಲಿ ಕಸ ಗೂಡಿಸಲು ಹಾಗು ಶೌಚಾಲಯ ಸ್ವಚ್ಚಮಾಡಲು 70 ಲಕ್ಷ ರೂ ಟೆಂಡರ್ ಕರೆಯಲಾಗಿದೆ. ಈಗಾಗಲೇ ಬಿಬಿಎಂಪಿ ದಕ್ಷಿಣ ವಲಯದ ಪ್ರಾಜೆಕ್ಟ್ ಇಂಜಿನಿಯರ್ ನಿಂದ ಟೆಂಡರ್ ಜಾಹೀರಾತು ಹೊರಡಿಸಲಾಗಿದೆ. ಸಾರ್ವಜನಕರು ಕರೆದಿರು ಟೆಂಡರ್ ನಲ್ಲಿ ಗೋಲ್ ಮಾಲ್ ಇದೆ ಅಂತ ಅರೋಪ ಮಾಡುತಿದ್ದಾರೆ ಅಲ್ಲದೆ ಬಾತ್ ರೂಂ ಕ್ಲಿನಿಂಗ್ ಗೆ ಕಸಕೊಡಿಸುಕ್ಕೆ 70 ಲಕ್ಷ ಬೇಕಾ ಅಂತ ಪ್ರಶ್ನೆ ಮಾಡುತಿದ್ದಾರೆ.

Share Post