BengaluruCrime

ರೂಪಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ರೋಹಿಣಿ ಸಿಂಧೂರಿ ಪಟ್ಟು

ಬೆಂಗಳೂರು: ರಾಜ್ಯದ ಇಬ್ಬರು ಮಹಿಳಾ ಆಧಿಕಾರಿಗಳ ಜಗಳ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಇಬ್ಬರು ಪ್ರತಿಷ್ಠೆಯಾಗಿ ಪರಿಗಣಿಸಿದ ಹಾಗಿದೆ. ಡಿ. ರೂಪಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ರೋಹಿಣಿ ಸಿಂಧೂರಿ ಪಟ್ಟು ಹಿಡಿದಿದ್ದಾರೆ,ಐಎಎಸ್ ರೋಹಿಣಿ ಸಿಂಧೂರಿಯಿಂದ ಪೊಲೀಸ್ ಆಯುಕ್ತರಿಗೆ ಇನ್ನು ರೂಪಾರವರ ವಿರುದ್ಧ ಎಫ್‌ಐಆರ್ ದಾಖಲಿಸಿಲ್ಲವೆಂದು ಪತ್ರ ಬರೆದಿದ್ದಾರೆ. ಫೆಬ್ರವರಿ 20 ರಂದು ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಅದ್ರೆ ಪೊಲೀಸರು ಪಿಟೀಷನ್ ಎಂದು ಪರಿಗಣಿಸಿದ್ದಾರೆ. ದೂರಿನ ಬಗ್ಗೆ ಐಪಿಸಿ ಹಾಗೂ ಐಟಿ ಆಕ್ಟ್ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲು ಪತ್ರ ಬರೆದಿದ್ದಾರೆ ಅಲ್ಲದೆ ಐಪಿಸಿ ಸೆಕ್ಷನ್ 354ಸಿ, 463, 509, 504, 120ಬಿ, 378 ಅಡಿ ದೂರು ದಾಖಲಿಸಬೇಕು. ಹಾಗೂ ಐಟಿ ಕಾಯ್ದೆ 43, 66, 66ಬಿ, 66ಇ, 67, 67ಎ, 71, 72, 74 ಅಡಿ ದೂರು ದಾಖಲಿಸುವಂತೆ ಮನವಿ ಮಾಡಿದ್ದಾರೆ.

Share Post