CrimeDistrictsUncategorized

ಬೈಕ್‌ಗೆ ಸಿಲುಕಿದ ಸೀರೆ ಸೆರಗು; ಒಂದು ಗಂಟೆ ನರಳಾಡಿದ ಮಹಿಳೆ

ಚಿಕ್ಕಮಗಳೂರು; ಬೈಕ್‌ನಲ್ಲಿ ತೆರಳುತ್ತಿದ್ದಾಗ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆ ಸೆರಗು ಬೈಕ್‌ ಚಕ್ರಕ್ಕೆ ಸಿಲುಕಿದೆ. ಇದ್ರಿಂದಾಗಿ ಒಂದು ಗಂಟೆಗೂ ಹೆಚ್ಚು ಕಾಲ ಮಹಿಳೆ ನರಳಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದಲ್ಲಿ ನಡೆದಿದೆ. 

ತರೀಕೆರೆ ಪಟ್ಟಣದ ಹೊರವಲಯದ ಇಟ್ಟಿಗೆ ಗ್ರಾಮದ ಯಶೋದಾ ಬಾಯಿ ಎಂಬಾಕೆಯೇ ಈ ರೀತಿ ಸಂಕಷ್ಟ ಅನುಭವಿಸಿದ ಮಹಿಳೆ. ಮಹಿಳೆ ತರೀಕೆರೆ ಪಟ್ಟಣಕ್ಕೆ ಬೈಕ್‌ನಲ್ಲಿ ಬರುತ್ತಿದ್ದರು. ಈ ವೇಳೆ ಅವರ ಸೆರಗು ಬೈಕ್‌ ಚಕ್ರಕ್ಕೆ ಸಿಲುಕಿದೆ. ಇದ್ರಿಂದ ಬೈಕ್‌ ಕೆಳಗೆ ಬಿದ್ದಿದೆ. ಜೊತೆಗೆ ಕಾಲು ಕೂಡಾ ಚಕ್ರದೊಳಗೆ ಸಿಲಿಕಿತ್ತು. ಇದ್ರಿಂದ ಮಹಿಳೆ ಅದ್ರಿಂದ ಹೊರಬರಲು ಒಂದು ಗಂಟೆ ಕಾಲ ಪರದಾಡಿದ್ದಾರೆ.

 

Share Post