ಪಾಲಿಕೆ ಸಿಬ್ಬಂದಿ ಮುಷ್ಕರ; ನಾಳೆ ಪಾಲಿಕೆ ಕಚೇರಿಗಳು ಬಂದ್
ಬೆಂಗಳೂರು; ಪಾಲಿಕೆ ವ್ಯಾಪ್ತಿಯ 198 ವಾರ್ಡ್‌ನ ಸುಮಾರು 7 ಸಾವಿರ ಸಿಬ್ಬಂದಿ ನಾಳೆ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕ್ಕೆ ಆಗ್ರಹಿಸಿ ಬಿಬಿಎಂಪಿ ನೌಕರರು ಪ್ರತಿಭಟನೆಗೆ ಮುಂದಾಗಿದ್ದಾರೆ. ಪಾಲಿಕೆ ನೌಕರರು ಹಾಗೂ ಅಧಿಕಾರಿಗಳು ರಾಜ್ಯ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಬಿಬಿಎಂಪಿಯ ಕಂದಾಯ,ಅರೋಗ್ಯ,ಶಿಕ್ಷಣ,ಮಾರುಕಟ್ಟೆ, ಯೋಜನೆ ಮತ್ತು ಅಡಳಿತ ವಿಭಾಗದ ಅಧಿಕಾರಿಗಳು ಸೇರಿದಂತೆ ನೌಕರರು ಈ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಬೇಡಿಕೆಗಳ ಈಡೇರಿಕೆಗೆ ಒತ್ತಯಿಸಿ ಸಾಮೂಹಿಕ ಮುಷ್ಕರಕ್ಕೆ ಮುಂದಾಗಿದ್ದಾರೆ. ಬಿಬಿಎಂಪಿ ಕೇಂದ್ರ ಕಚೇರಿಯ ಮುಂದೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪ್ರತಿಭಟನೆ ಮಾಡಲಿದ್ದಾರೆ. ಸಾಮೂಹಿಕ ರಜೆ ಹಾಕಿ 7 ಸಾವಿರ ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಹಲವು ಬಾರಿ ಸಿಎಂಗೆ ಅಯುಕ್ತರಿಗೆ ಮಾನವಿ ನೀಡಿದ್ರು ಪ್ರಯೋಜನವಾಗದ ಹಿನ್ನೆಲೆಯಲ್ಲಿ ಪಾಲಿಕೆ ನೌಕರರು ಪ್ರತಿಭಟನೆಗೆ ಮುಂದಾಗಿದ್ದಾರೆ.
ನೌಕರರ ಹಲವು ದಿನಗಳಿಂದ ಈಡೇರದ ಬೇಡಿಕೆಗಳೆಂದರೆ;
– ನಿಯಮಾವಳಿಯಂತೆ ಸಕಾಲದಲ್ಲಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಸೌಲಭ್ಯ ಒದಗಿಸುತ್ತಿಲ್ಲ
– ಪಾಲಿಕೆಯಲ್ಲಿ ವಿಲೀನಗೊಂಡಿರುವ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುತ್ತಿಲ್ಲ
– ಆರೋಗ್ಯ ಕಾರ್ಡ್ ನೀಡುವುದಾಗಿ ಹೇಳಿ ಇದುವರೆಗೆ ನೀಡಿಲ್ಲ
– ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೌಲಭ್ಯ ಪಡೆದುಕೊಳ್ಳಲು ಆಗುತ್ತಿಲ್ಲ
– ಅನಾರೋಗ್ಯಕ್ಕೆ ಒಳಗಾದಾಗ ಬಿಬಿಎಂಪಿ ಆಸ್ಪತ್ರೆಗಳು ಮಾತ್ರವಲ್ಲದೆ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶ ಮಾಡಿಕೊಡಬೇಕು
– ಖಾಲಿ ಇರುವ ಎಲ್ಲ ವೃಂದದ ಮುಂಬಡ್ತಿ ನೀಡಬೇಕು
ಹೀಗೆ ಹತ್ತು ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಬಂದ್ ಗೆ ಕರೆನೀಡಿದೆ