2 ಸಾವಿರ ರೂ. ನೋಟುಗಳ ಚಲಾವಣೆ ಕುಂಠಿತ; ಕಪ್ಪು ಹಣ ಕೂಡಿಡುವವರಿಗೆ ಸಹಕಾರವೇ? ಎಂದ ಕಾಂಗ್ರೆಸ್
ಬೆಂಗಳೂರು; ಎರಡು ಸಾವಿರ ರೂಪಾಯಿ ನೋಟುಗಳನ್ನು ಚಲಾವಣೆಗೆ ತಂದ ಬಿಜೆಪಿ ಸರ್ಕಾರ, ಆ ಮೂಲಕ ಕಪ್ಪು ಹಣ ಸಂಗ್ರಹ ಸುಲಭ ಅವಕಾಶ ಮಾಡಿಕೊಟ್ಟಿದೆ ಎಂಬ ರೀತಿಯಲ್ಲಿ ಕಾಂಗ್ರೆಸ್ ಪಕ್ಷ ಆಪಾದನೆ ಮಾಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಎರಡು ಸಾವಿರ ರೂಪಾಯಿ ನೋಟುಗಳ ಚಲಾವಣೆ ಇಳಿಮುಖವಾಗುತ್ತಿದೆ. ಎರಡು ಸಾವಿರ ರೂಪಾಯಿ ನೋಟುಗಳು ಕಾಣಿಸುತ್ತಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದೆ.
ದೇಶದ ಅರ್ಥ ವ್ಯವಸ್ಥೆಯ ಪತನಕ್ಕೆ ನಾಂದಿಯಾಗಿದ್ದ ನೋಟು ರದ್ದತಿಯನ್ನು ಸಮರ್ಥಿಸಿಕೊಳ್ಳಲು ಬಿಜೆಪಿ ಹೇಳುತ್ತಿದ್ದ ಕಾರಣ ಕಪ್ಪು ಹಣ. ಅವೈಜ್ಞಾನಿಕವಾಗಿ ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಹೊರತಂದು ಮಾಡಿದ ಸಾಧನೆ ಏನು? ಕಪ್ಪು ಹಣ ಕೂಡಿಡುವವರಿಗೆ ಸಹಕಾರವೇ? ಎಂದು ಕಾಂಗ್ರೆಸ್ ತನ್ನ ಟ್ವೀಟ್‌ನಲ್ಲಿ ಪ್ರಶ್ನೆ ಮಾಡಿದೆ. ಗಣನೀಯ ಪ್ರಮಾಣದಲ್ಲಿ ಎರಡು ಸಾವಿರ ರೂಪಾಯಿ ನೋಟುಗಳು ಚಲಾವಣೆಯಿಂದ ಕಣ್ಮರೆಯಾಗಿವೆ ಎಂದರೆ ಏನರ್ಥ..? ಎಂದು ಕಾಂಗ್ರೆಸ್ ಕೇಳಿದೆ.