Bengaluru

ಡಿಸೆಂಬರ್‌ 31ರ ರಾತ್ರಿ ಮೆಟ್ರೋ ಸೇವೆ ವಿಸ್ತರಣೆ; ಬೆಳಗಿನಜಾವ 2.15ರವರೆಗೂ ಇರುತ್ತೆ ಸೇವೆ

ಬೆಂಗಳೂರು; ಹೊಸ ವರ್ಷ ಸ್ವಾಗತಿಸೋದಕ್ಕೆ ಎಲ್ಲರೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಿ ಡಿಸೆಂಬರ್‌ 31ರ ರಾತ್ರಿ ಸಂಭ್ರಮಾಚರಣೆಗಳು, ಪಾರ್ಟಿಗಳು ಜೋರಾಗಿರುತ್ತವೆ. ಎಂಜಿ ರಸ್ತೆ, ಬ್ರಿಗೇಡ್‌ ರಸ್ತೆಗಳು ಕಿಕ್ಕಿರಿದು ತುಂಬಿರುತ್ತವೆ. ತಡರಾತ್ರಿವರೆಗೂ ಪಾರ್ಟಿಗಳು, ಸಂಭ್ರಮಾಚರಣೆಗಳು ನಡೆಯುವುದರಿಂದ ಮೆಟ್ರೋ ಡಿಸೆಂಬರ್‌ 31ರಂದು ತನ್ನ ಸೇವೆಯನ್ನು ವಿಸ್ತರಿಸಿದೆ.

ಡಿಸೆಂಬರ್‌ 31ರಂದು ಮಧ್ಯರಾತ್ರಿಯಿಂದ ಜನವರಿ 1 ರ ಬೆಳಗಿನ ಜಾವ 2.15ರವರೆಗೆ ಮೆಟ್ರೋ ಸೇವೆ ಇರಲಿದೆ.  ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಈ ಸೇವೆ ವಿಸ್ತರಿಸುತ್ತಿದೆ. ಜ.1 ರ ಮಧ್ಯರಾತ್ರಿ 1:30 ಗಂಟೆಗೆ ಎಲ್ಲಾ ಟರ್ಮಿನಲ್‌ ನಿಲ್ದಾಣಗಳಿಂದ ಕೊನೆಯ ರೈಲು ಸೇವೆ ಇರುತ್ತದೆ. 15 ನಿಮಿಷಕ್ಕೊಂದು ರೈಲು ಓಡಾಟ ನಡೆಸುತ್ತವೆ. ಮೆಜೆಸ್ಟಿಕ್‌ನಿಂದ ಜ.1 ರ ಬೆಳಗಿನ ಜಾವ 2:15 ರ ವರೆಗೆ ಎಲ್ಲಾ ನಾಲ್ಕು ದಿಕ್ಕುಗಳಿಗೂ ಕೊನೆಯ ರೈಲು ಸೇವೆ ಇರಲಿದೆ.

 

Share Post