Bengaluru

ಪಠ್ಯದಲ್ಲಿ ನೈತಿಕ ಶಿಕ್ಷಣ; ಸ್ವಾಮೀಜಿಗಳ ನೇತೃತ್ವದ ಸಮಿತಿ ರಚನೆಗೆ ಚಿಂತನೆ

ಬೆಂಗಳೂರು;  ಶಾಲಾ ಪಠ್ಯದಲ್ಲಿ ಭಗವದ್ಗೀತೆ, ರಾಮಾಯಣ ಸೇರ್ಪಡೆಗೆ ಸಿದ್ಧತೆ ಶುರುವಾಗದೆ. ಅದಕ್ಕಾಗಿ ನೈತಿಕ ಶಿಕ್ಷಣ ಪಠ್ಯ ಸಮಿತಿ ರಚನೆಗೆ ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ. ನಾಡಿನ ಪ್ರಮುಖ ಸ್ವಾಮೀಜಿಗಳ ನೇತೃತ್ವದಲ್ಲಿ ಈ  ಸಮಿತಿ ರಚಿಸಲು ನಿರ್ಧಾರ ಮಾಡಲಾಗಿದ್ದು, ನೈತಿಕ ಶಿಕ್ಷಣದ ಪಠ್ಯ ಹೇಗೆ ಇರಬೇಕು?, ಏನೆಲ್ಲಾ ಅಡಕವಾಗಿರಬೇಕು ಎಂಬುದನ್ನು ಶ್ರೀಗಳು ನಿರ್ಧರಿಸುತ್ತಾರೆ ಎಂದು ಹೇಳಲಾಗುತ್ತಿದೆ.

ಸುತ್ತೂರು ಶ್ರೀಗಳು, ಆದಿಚುಂಚನಗಿರಿ ಶ್ರೀಗಳು, ಸಿದ್ದಗಂಗಾ ಶ್ರೀಗಳು ಈ ಸಮಿತಿಯಲ್ಲಿರಲಿದ್ದಾರೆ ಎಂದು ಹೇಳಲಾಗುತ್ತಿದೆ.  ರಾಮಾಯಣ, ಮಹಾಭಾರತ, ಭಗವದ್ಗೀತೆ ಸೇರಿ ಮಹಾ ದಾರ್ಶನಿಕ ಗ್ರಂಥಗಳ ವಿಷಯಗಳು ಪಠ್ಯದಲ್ಲಿ ಸೇರ್ಪಡೆ ಮಾಡುವ ಕುರಿತು ಸಮಿತಿ ನಿರ್ಧಾರ ಕೈಗೊಳ್ಳುತ್ತದೆ ಎಂದು ಹೇಳಲಾಗಿದೆ.

 

 

Share Post