Bengaluru

ಪಿತೂರಿ ನಮ್ಮ ಕೆಲಸವಲ್ಲ: ಕೇಸರಿ ಶಾಲು, ಪೇಟಕ್ಕೆ ಆರ್ಡರ್‌ ಕೊಟ್ಟವರು ಯಾರೆಂದು ಗೊತ್ತಿದೆ-ಡಿಕೆಶಿ

ಬೆಂಗಳೂರು: ರಾಜ್ಯದಲ್ಲಿ ಹಿಜಾಬ್‌ ವಿವಾದದ ಪಿತೂರಿ ಯಾರೆಂದು ನನಗೆ ತಿಳಿದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.  ಮಕ್ಕಳಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡ್ತಿದ್ದಾರೆ ಜಾತಿ, ಧರ್ಮ ಇದೆಲ್ಲಾ ಮಕ್ಕಳ ಮನಸ್ಸಲ್ಲಿ ಬಿತ್ತುವುದು ಬೇಕಾ..? ಎಂದು ಡಿಕೆಶಿ ಪ್ರಶ್ನೆ ಮಾಡಿದ್ದಾರೆ.

ಪಿತೂರಿ ಶುರುವಾಗಿದ್ದು ಯಾರು, ಎಲ್ಲಿ ಅಂತ ನನಗೆ ಗೊತ್ತು. ಮಡ್ಯದಲ್ಲಿ, ಶಿವಮೊಗ್ಗದಲ್ಲಿ ಯಾರು ಪಿತೂರಿ ಮಾಡದ್ದಾರೆಂದು ಗೊತ್ತಿದೆ. ಮಕ್ಕಳಿಗೆ ಪೇಟ, ಶಾಲುಗಳು ರಾತ್ರೋರಾತ್ರಿ ಎಲ್ಲಿಂದ ಬಂತು. 50ಲಕ್ಷ ಶಾಲುಗಳನ್ನು ಸೂರತ್‌ನಲ್ಲಿ ಆರ್ಡರ್‌ನಲ್ಲಿ ಕೊಟ್ಟಿದ್ದಾರೆ. ನನ್ನ ಬಳಿ ಜನರಿದ್ದಾರೆ ನನಗೂ ಎಲ್ಲಾ ಮಾಹಿತಿ ತಿಳಿದಿದೆ. ರಾಷ್ಟ್ರಧ್ವಜ ನಮ್ಮ ಧರ್ಮ, ಸಂವಿಧಾನ ನಮ್ಮ ಭಗವದ್ಗೀತೆ, ರಾಷ್ಟ್ರಧ್ವಜದ ಬದಲಿಗೆ ಕೇಸರಿ ಧ್ವಜ ಹಾರಿಸ್ತಾರಂದ್ರೆ ಏನು..?

ಧ್ವಜ ಬೇರೆ ಕಂಬ ಬೇರೆನಾ..ಕಂಬದ ಮೇಲೆನೆ ಧ್ವಜ ಹಾರಿಸೋದು. ಸಿಕ್ಕ ಸಿಕ್ಕ ಧ್ವಜಗಳನ್ನು ಹಾರಿಸೋಕೆ ಸಾಧ್ಯವಿಲ್ಲ, ಶಿವಮೊಗ್ಗದಲ್ಲಿ ಯಾವ ಮಂತ್ರಿ ಮಗ ಕೇಸರಿ ಶಾಲು ತರಿಸಿ ಹಂಚಿದ್ದಾರೆ. ಬಿಜೆಪಿ ಕಾರ್ಯಕರ್ತರು ಈ ಕೆಲಸ ಮಾಡ್ತಿದಾರೆಂದು ತಿಳಿದಿದೆ. ವಿಜ್ಞಾನಿಗಳು, ವಿದ್ಯಾವಂತರನ್ನು ತಯಾರು ಮಾಡುವ ಕೆಲಸ ಮಾಡಬೇಕು ಅದು ಬಿಟ್ಟು ಹೀಗೆ ವಿಷಬೀಜ ಬಿತ್ತುವ ಕೆಲಸ ಮಾಡಬಾರದು. ಪೋಷಕರು ಈ ಬಗ್ಗೆ ಗಮನ ಹರಿಸಿ ಮಕ್ಕಳಿಗೆ ಬುದ್ಧಿ ಹೇಳಿ ಎಲ್ಲಾ  ಧರ್ಮಗಳಿಗೂ ಗೌರವ ಕೊಡುವುದು ನಮ್ಮ ಸಂಸ್ಕೃತಿ.

Share Post