68 ವರ್ಷದ ವೃದ್ಧನಿಗೆ ಹನಿಟ್ರ್ಯಾಪ್; ಸಿಕ್ಕಿಬಿದ್ದ ದಂಪತಿ
ತಿರುವನಂತಪುರಂ; ಕೇರಳದಲ್ಲಿ 68 ವರ್ಷದ ವೃದ್ಧನ ಆಂಟಿಯೊಬ್ಬಳು ಹನಿಟ್ರ್ಯಾಪ್ಗೆ ಬೀಳಿಸಿದ್ದು, ಬರೋಬ್ಬರಿ 23 ಲಕ್ಷ ರೂಪಾಯಿ ವಂಚನೆ ಮಾಡಿದ್ದಾಳೆ. ಕೇರಳದ ಕಲ್ಪಕಂಚೇರಿಯಲ್ಲಿ ಈ ಘಟನೆ ನಡೆದಿದ್ದು, ಈ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತ್ರಿಸ್ಸೂರ್ನ ಕುನ್ನಮ್ಕುಲಮ್ ಮೂಲದ ವ್ಲಾಗರ್ ರಶೀದಾ (28) ಹಾಗೂ ಆಕೆಯ ಪತಿ ನಿಶಾದ್ ರನ್ನು ಪೊಲೀಸರು ಬಂಧಿಸಿದ್ದಾರೆ. ಒಳ್ಳೆ ಸಿಂಗಾರ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಹರಿಯಬಿಡುತ್ತಿದ್ದ ರಶೀದಾ, 68 ವೃದ್ಧನಿಗೆ ಹನಿಟ್ರ್ಯಾಪ್ ಮಾಡಿ ಲಕ್ಷ ಲಕ್ಷ ಹಣ ಕಿತ್ತಿದ್ದಳು. ಅದಕ್ಕೆ ಆಕೆಯ ಗಂಡ ಕೂಡಾ ಸಾಥ್ ನೀಡಿದ್ದ. ಈ ವಿಚಾರ ಸಂತ್ರಸ್ತನ ಮನೆಯವರಿಗೆ ಗೊತ್ತಾಗಿದೆ. ಕೂಡಲೇ ಅವರು ವೃದ್ಧನನ್ನು ಕರೆದುಕೊಂಡು ದೂರು ಕೊಡಿಸಿದ್ದಾರೆ. ಇದೀಗ ದಂಪತಿ ಪೊಲೀಸರ ಅತಿಥಿಗಳಾಗಿದ್ದಾರೆ.