Bengaluru

ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಪರ-ವಿರೋಧ ಯಾರೇ ಮಾತಾಡಿದ್ರು ಒದ್ದು ಒಳಗೆ ಹಾಕಿ: ಪ್ರಲ್ಹಾದ್ ಜೋಶಿ

ಬೆಂಗಳೂರು: ನ್ಯಾಯಾಲಯದ ಮಧ್ಯಂತರ ಆದೇಶವನ್ನು ಮೀರಿ ದರ್ಪ ನಡೆಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ.  ಹಿಜಾಬ್ ವಿವಾದ ಕೋರ್ಟ್‌ನಲ್ಲಿದ್ದು, ಮಧ್ಯಂತರ ಆದೇಶ ಕೂಡಾ ಬಂದಿದೆ.  ನ್ಯಾಯಾಲಯದ ಮಧ್ಯಂತರ ಆದೇಶ ಪಾಲನೆಗಾಗಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಇದನ್ನು‌ ಮೀರಿ ಶಾಲಾ ಕಾಲೇಜುಗಳ ಬಳಿ ವಿದ್ಯಾರ್ಥಿಗಳನ್ನು ಬಿಟ್ಟು, ಯಾರೇ ಹಿಜಾಬ್ ಪರ ಅಥವಾ ವಿರೋಧ ಮಾಡಲು ಬರುವವರನ್ನು ಒದ್ದು ಒಳಗೆ ಹಾಕಿ ಎಂದು ಪೊಲೀಸರಿಗೆಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೂಚನೆ ನೀಡಿದ್ರು.

ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶ ಎಲ್ಲಿ ಪಾಲನೆ ಆಗುವುದಿಲ್ಲ ಅಲ್ಲಿ‌ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ನ್ಯಾಯಾಲಯ ನೀಡಿದ ಆದೇಶವನ್ನು ಎಲ್ಲರು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿರುತ್ತದೆ. ಮುಂದಿನ ದಿನಗಳಲ್ಲಿ ನ್ಯಾಯಾಲಯವು ಅಂತಿಮ ಆದೇಶ ಪರ ಅಥವಾ ವಿರೋಧ ನೀಡಬಹುದು, ಆಗಲು ಎಲ್ಲರು ಅದನ್ನು ಒಪ್ಪಿಕೊಂಡು ಮುಂದೆ ಸಾಗಬೇಕಾಗುತ್ತದೆ.‌ ಆದರೆ ನ್ಯಾಯಾಲಯದ ಅಂತಿಮ ಆದೇಶ ಬಂದ ಬಳಿಕ ಎಲ್ಲರು ಪಾಲನೆ ಮಾಡಬೇಕು, ಅದನ್ನು ಬಿಟ್ಟು ನಾವು ವಿರೋಧ ಮಾಡುತ್ತೇವೆ ಅನ್ನುವುದು ಸರಿಯಲ್ಲ ‌ಎಂದರು.

ಮುಂದಿನ 50 ವರ್ಷಗಳವರೆಗೆ ಕಾಂಗ್ರೆಸ್‌ ಧರಣಿ ಮಾಡುವ ಹಾಗೇ ದೇವರು ಆರ್ಶೀವಾದಿಸಲಿ

ಕಾಂಗ್ರೆಸ್ ಪಕ್ಷದವರಿಗೆ ಧರಣಿ ಮಾಡುವುದೆ ಒಂದು ಕಾಯಕವಾಗಿದೆ. ಹಾಗಾಗಿ ಮುಂಬರುವ ಐವತ್ತು ವರ್ಷಗಳವರೆಗೆ ಕಾಂಗ್ರೆಸ್‌ ವಿರೋಧ ಪಕ್ಷದಲ್ಲಿಯೇ‌ ಕುಳಿತುಕೊಂಡು ಧರಣಿ ಮಾಡುವ ಹಾಗೇ ದೇವರು ಆರ್ಶೀವಾದ ಮಾಡಲಿ. ಸದನದಲ್ಲಿ ಚರ್ಚೆ ಮಾಡುವುದಕ್ಕೆ ಸಾಕಷ್ಟು ಜನಪರ ವಿಷಯಗಳು ಇವೆ. ಕೋವಿಡ್ ಸಮಸ್ಯೆಯಿಂದ ಜನಜೀವನ ಈಗ ಸಹಜ ಸ್ಥಿತಿಗೆ ಮರಳುತ್ತಿದೆ. ಜನ ಪರ ಹಲವಾರು ಸಮಸ್ಯೆಗಳು ಇವೆ. ಅವುಗಳನ್ನು ಮುಂದಿಟ್ಟುಕೊಂಡು ಸರ್ಕಾರಕ್ಕೆ ವಿರೋಧ ಪಕ್ಷ ಸಲಹೆ ಸೂಚನೆಗಳನ್ನು ನೀಡಬೇಕು. ಜನಪರ ಸಮಸ್ಯೆಗಳನ್ನು ಇಟ್ಟುಕೊಂಡು ಸರ್ಕಾರವನ್ನು ಕಟ್ಕಕಟೆಯಲ್ಲಿ ನಿಲ್ಲಿಸಲು ಅವಕಾಶವಿರುತ್ತದೆ. ಆದರೆ ಇಂದಿನ ರಾಜ್ಯ ವಿರೋಧ ಪಕ್ಷ ಬೇಡವಾದ ವಿಚಾರವನ್ನು ಮುಂದಿಟ್ಟಕೊಂಡು ಸದನದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು.‌

Share Post