ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಕೊಟ್ರಾ ನಮ್ಮ ಮೆಟ್ರೋ ಅಧಿಕಾರಿ?
ಬೆಂಗಳೂರು; ನಮ್ಮ ಮೆಟ್ರೋ ಬಂದ ಮೇಲೆ ಲಕ್ಷಾಂತರ ಜನಕ್ಕೆ ಅನುಕೂಲವಾಗಿದೆ.. ಲಕ್ಷಾಂತರ ಜನರು ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ಹೊಂದಿದ್ದಾರೆ. ಈ ನಡುವೆ ನಮ್ಮ ಮೆಟ್ರೋ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತೆ.. ಒಂದಿಲ್ಲೊಂದು ಅವಾಂತರಗಳು ನಡೆಯುತ್ತಿರುತ್ತವೆ.. ಇದೀಗ ಮತ್ತೊಂದು ಅಪವಾದ ನಮ್ಮ ಮೆಟ್ರೋ ಮೇಲೆ ಬಂದಿದೆ.. ಮಹಿಳಾ ಸಿಬ್ಬಂದಿಯೊಬ್ಬರಿಗೆ ಹಿರಿಯ ಅಧಿಕಾರಿಯಿಂದ ಲೈಂಗಿಕ ಕಿರುಕುಳ ಕೊಟ್ಟ ಆರೋಪ ಕೇಳಿಬಂದಿದೆ..
ಇದನ್ನೂ ಓದಿ; Loksabha Election Date; ಮಧ್ಯಾಹ್ನ ಲೋಕಸಭಾ ಚುನಾವಣೆ ವೇಳಾಪಟ್ಟಿ ಪ್ರಕಟ; ಇಂದಿನಿಂದಲೇ ನೀತಿ ಸಂಹಿತೆ!
ಮೈ, ಕೈ ಮುಟ್ಟಿ ಅಸಭ್ಯವಾಗಿ ವರ್ತನೆ ಆರೋಪ;
ನಮ್ಮ ಮೆಟ್ರೋದಲ್ಲಿ ಸೆಕ್ಯೂರಿಟಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಯೊಬ್ಬರಿಗೆ ರಾಜಾಜಿನಗರದ ಮೆಟ್ರೋ ನಿಲ್ದಾಣದ ಸಹಾಯಕ ವಿಭಾಗಾಧಿಕಾರಿ ಪಿ.ಗಜೇಂದ್ರ ಎಂಬುವವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಮಹಿಳಾ ಸೆಕ್ಯೂರಿಟಿ ಸಿಬ್ಬಂದಿಗೆ ಅಶ್ಲೀಲ ಶಬ್ದ ಬಳಸಿ ನಿಂದಿಸುವುದಲ್ಲದೆ, ಮೈ ಕೈ ಮುಟ್ಟಿ ಕಿರುಕುಳ ನೀಡುತ್ತಾರೆ ಎಂದು ದೂರವಾಗಿದೆ. ಈ ಬಗ್ಗೆ ಮಹಿಳಾ ಸೆಕ್ಯೂರಿಟಿ ಸಿಬ್ಬಂದಿಯೊಬ್ಬರು ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ..
ಇದನ್ನೂ ಓದಿ; ಮಲ್ಲಿಕಾರ್ಜುನ ಖರ್ಗೆ ತವರಲ್ಲಿ ಪ್ರಧಾನಿ ಮೋದಿ ಹವಾ; ಇಂದು ಬೃಹತ್ ಸಮಾವೇಶ
ಸಹಕರಿಸದಿದ್ದರೆ ದೂರಕ್ಕೆ ವರ್ಗಾವಣೆ ಬೆದರಿಕೆ;
ಆರೋಪಿತ ಅಧಿಕಾರಿ ಗಜೇಂದ್ರ ಅವರು, ಮಹಿಳಾ ಸೆಕ್ಯೂರಿಟಿ ಸಿಬ್ಬಂದಿಗೆ ಕಿರುಕುಳ ಕೊಡುವುದಲ್ಲದೆ, ಅದಕ್ಕೆ ಸಹಕರಿಸದೇ ಹೋದರೆ ವರ್ಗಾವಣೆ ಮಾಡಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರಂತೆ.. ಈ ಅಧಿಕಾರಿಯ ಕಿರುಕುಳದಿಂದ ಬೇಸತ್ತು ಮಹಿಳಾ ಸೆಕ್ಯೂರಿಟಿ ಗಾರ್ಡ್, ತಮ್ಮ ಭದ್ರತಾ ಏಜೆನ್ಸಿಗೆ ದೂರು ಕೊಟ್ಟಿದ್ದಾರೆ.. ಆದ್ರೆ ಸೆಕ್ಯೂರಿಟಿ ಏಜೆನ್ಸಿ ಮಾಲೀಕ ಕೂಡಾ ಅಧಿಕಾರಿ ಜೊತೆ ಸಹಕರಿಸುವಂತೆ ಒತ್ತಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.. ಅಧಿಕಾರಿ ಜೊತೆ ಸಹಕರಿಸಲಿಲ್ಲ ಎಂದರೆ ಕೆಲಸದಿಂದ ತೆಗೆಯುವುದಾಗಿಯೂ ಬೆದರಿಕೆ ಒಡ್ಡಲಾಗಿದೆ ಎಂದು ಸಂತ್ರಸ್ತೆ ಆರೋಪ ಮಾಡಿದ್ದಾರೆ. ಇನ್ನು ಪೊಲೀಸರಿಗೆ ದೂರು ಕೊಡುವ ಮೊದಲು ಬಿಎಂಆರ್ಸಿಎಲ್ನ ಹಿರಿಯ ಅಧಿಕಾರಿಗಳಿಗೂ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ; Mysore Loksabha; ಮೈಸೂರಲ್ಲಿ ಯತೀಂದ್ರ-ಯದುವೀರ ಯುದ್ಧ ಫಿಕ್ಸ್!
ಮಹಿಳಾ ಭದ್ರತಾ ಸಿಬ್ಬಂದಿ ಕೊಟ್ಟ ದೂರಿನಲ್ಲಿ ಏನಿದೆ..?;
ರಾಜಾಜಿನಗರದ ಮೆಟ್ರೋ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯಾಗಿ ನಾನು ಕೆಲಸ ಮಾಡುತ್ತಿದ್ದೇನೆ. ನಿಲ್ದಾಣದ ಎಎಸ್ಓ ಗಜೇಂದ್ರ ಅವರು ನನಗೂ ಹಾಗೂ ಇತರೆ ಸಿಬ್ಬಂದಿಗೆ ಯಾವಾಗಲೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಾರೆ. ಒತ್ತಾಯ ಪೂರ್ವಕವಾಗಿ ಮೈ, ಕೈ ಮುಟ್ಟಿ ನಮ್ಮ ಜೊತೆ ಅಸಭ್ಯವಾಗಿ ವರ್ತನೆ ಮಾಡುತ್ತಾರೆ. ಇದಕ್ಕೆ ವಿರೋಧ ಮಾಡಿದರೆ ಸುಳ್ಳು ಆರೋಪ ಮಾಡಿ ವರ್ಗಾವಣೆ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ. ನಮ್ಮ ಭದ್ರತಾ ಏಜೆನ್ಸಿ ಮಾಲೀಕರಿಗೆ ಈ ಬಗ್ಗೆ ದೂರು ಕೊಟ್ಟರೆ, ಅವರೂ ಕೂಡಾ ಅಧಿಕಾರಿ ಜೊತೆ ಸಹಕರಿಸಿ, ಆಗದಿದ್ದರೆ ಕೆಲಸ ಬಿಡಿ ಎನ್ನುತ್ತಾರೆ ಎಂದು ಮಹಿಳಾ ಭದ್ರತಾ ಸಿಬ್ಬಂದಿ ದೂರು ನೀಡಿದ್ದಾರೆ.