BengaluruLifestyle

ಸೆಪ್ಟೆಂಬರ್‌ನಿಂದ ಹಣದ ಬದಲು ಅಕ್ಕಿಯೇ ಕೊಡಲು ಚಿಂತನೆ; ಕೆ.ಹೆಚ್‌.ಮುನಿಯಪ್ಪ

ಬೆಂಗಳೂರು; ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಸರ್ಕಾರಗಳು ರಾಜ್ಯಕ್ಕೆ ಅಕ್ಕಿ ಪೂರೈಕೆ ಮಾಡಲು ಒಪ್ಪಿವೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ನಿಂದ ಹಣದ ಬದಲು ಅಕ್ಕಿಯನ್ನೇ ನೀಡಲು ಚಿಂತನೆ ನಡೆಸಿದ್ದೇವೆ ಎಂದು ಆಹಾರ ಮತ್ತು ನಾರಗಿಕ ಪೂರೈಕೆ ಸಚಿವ ಕೆ.ಹೆಚ್‌.ಮುನಿಯಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ರೇಷನ್‌ ಕಾರ್ಡ್‌ ವಿತರಣೆ ಸ್ಥಗಿತವಾಗಿತ್ತು, ಆದ್ರೆ ಈಗ ಹೊಸ ರೇಷನ್‌ ಕಾರ್ಡ್‌ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಹೇಳಿದ್ದಾರೆ.

ಅನ್ನಭಾಗ್ಯ ಯೋಜನೆಯ ಉದ್ದೇಶವೇ ಹಸಿದವರಿಗೆ ಅನ್ನ ನೀಡೋದು. ಈವರೆಗೆ ಒಂದು ಕೋಟಿ ಕುಟುಂಬಗಳಿಗೆ ಅಕ್ಕಿ ಜೊತೆಗೆ ಹಣ ನೀಡಲಾಗಿದೆ. ಇದಕ್ಕಾಗಿ ಸುಮಾರು 556 ಕೋಟಿ ರೂಪಾಯಿ ವ್ಯಯ ಮಾಡಲಾಗಿದೆ. ಇದರಿಂದ ಮೂರೂವರೆ ಕೋಟಿ ಫಲಾನುಭವಿಗಳಿಗೆ ಅನುಕೂಲವಾಗಿದೆ ಎಂದು ಸಚಿವರು ಹೇಳಿದ್ದಾರೆ. ಇನ್ನು ಹೊಸ ಪಡಿತರ ಕಾರ್ಡ್‌ ವಿತರಣೆ, ಹಳೇ ಕಾರ್ಡ್‌ನಲ್ಲಿ ಹೆಸರು ಸೇರ್ಪಡೆಗೆ ಅವಕಾಶ ನೀಡಲಾಗಿದೆ ಎಂದೂ ಸಚಿವರು ಹೇಳಿದ್ದಾರೆ.

ಆಂಧ್ರ ಹಾಗೂ ತೆಲಂಗಾಣದವರು ಅಕ್ಕಿ ನೀಡಲು ಒಪ್ಪಿಗೆ ಕೊಟ್ಟಿದ್ದಾರೆ. ಆಹಾರ ನಿಗಮ ನೀಡುವ ದರದಲ್ಲಿ ಅಕ್ಕಿ ನೀಡುವಂತೆ ಅವರಿಗೆ ಮನವಿ ಮಾಡಿಕೊಂಡಿದ್ದೇವೆ. ಇನ್ನೊಂದು ವಾರದಲ್ಲಿ ಅಲ್ಲಿನ ಅಧಿಕಾರಿಗಳು ಚರ್ಚೆ ಮಾಡಿ ನಿರ್ಧಾರ ಹೇಳುತ್ತಾರೆ. ಅವರು ಅಕ್ಕಿ ಪೂರೈಕೆ ಮಾಡಿದರೆ ಮುಂದಿನ ತಿಂಗಳಿಂದ ಹಣದ ಬದಲಾಗಿ ಅಕ್ಕಿಯನ್ನೇ ನೀಡುತ್ತೇವೆ ಎಂದು ಹೇಳಿದ್ದಾರೆ.

 

Share Post