EconomyLifestyle

ಸಾಲ ಮಾಡಿ ತಪ್ಪಿಸಿಕೊಂಡು ಓಡಾಡ್ತಿದ್ದೀರಾ..?; ಹಾಗಾದರೆ ನಿಮ್ಮಷ್ಟು ದಡ್ಡರು ಮತ್ತೊಬ್ಬರಿಲ್ಲ!

ಕಷ್ಟ ಮನುಷ್ಯರಿಗೆ ಬರದೇ ಪ್ರಾಣಿಗಳಿಗೆ ಬರುತ್ತಾ ಅನ್ನೋ ಮಾತನ್ನ ನೀವು ಕೇಳೇ ಇರ್ತೀರಿ… ಮನುಷ್ಯ ಅಂತ ಹುಟ್ಟಿದ ಮೇಲೆ ಒಂದಿಲ್ಲೊಂದು ಕಷ್ಟ ಅನುಭವಿಸ್ಲೇಬೇಕು… ಆದ್ರೆ ಹಣಕಾಸಿನ ಸಂಕಷ್ಟ ಎದುರಾದಾಗ ಮನುಷ್ಯ ಮಾನಸಿಕವಾಗಿ ಕುಗ್ಗಿಹೋಗ್ತಾನೆ… ಸಾಲದ ಮೇಲೆ ಸಾಲ ಮಾಡಿ ದಿಕ್ಕು ತೋಚದಂತಾಗಿ ಕೂತುಬಿಡ್ತಾನೆ.. ಅಂತಾ ಸಂಕಷ್ಟವನ್ನು ನೀವೂ ಅನುಭವಿಸುತ್ತಿರಬಹುದು.. ಮೈ ತುಂಬಾ ಸಾಲ, ತಿಂಗಳು ಶುರುವಾಯ್ತು ಅಂದ್ರೆ ಹತ್ತಾರು ಇಎಂಐ ಕಟ್ಟೋ ಸಂಕಷ್ಟ… ಕೈಸಾಲ ಕೊಟ್ಟವರು ಬೇರೆ ಬೆನ್ನುಬಿದ್ದಿರ್ತಾರೆ…

ಇಂತ ಸಂದರ್ಭದಲ್ಲಿ ಪ್ರತಿಯೊಬ್ಬರು ಮಾಡೋ ಕೆಲ್ಸ ನಾಟ್ರೀಚಬಲ್ಆಗೋದು… ಅಂದ್ರೆ ಕೈಗೆ ಸಿಗದೇ ಓಡಾಡೋದು, ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿಕೊಳ್ಳೋದು, ಮಾಡೋ ಕೆಲ್ಸಕ್ಕೂ ಚಕ್ಕರ್‌ ಹಾಕೋದು… ಹೀಗೆ, ಸಾಲಗಾರ ಯಾರಿಗೂ ಸಿಗದೆ ಭೂಗತನಾಗ್ಬಿಡ್ತಾನೆ.. ನಮ್ಮನ್ನು ನಾವು ನಾಶ ಮಾಡಿಕೊಳ್ಳೋದು ಅಂದ್ರೆ ಇದೇ ನೋಡಿ… ಯಾಕಂದ್ರೆ ಕೈಗೆ ಸಿಗದೇ ಓಡಾಡಿದ್ರೆ ಸಾಲ ಕೊಟ್ಟವರು ನೀನು ಕೊಡೋದು ಬೇಡ ಅಂತ ಯಾವ ಕಾರಣಕ್ಕೂ ಬಿಟ್ಟುಬಿಡಲ್ಲ… ಸ್ವಿಚ್ಆಫ್ ಮಾಡಿಕೊಂಡಾಕ್ಷಣ ಬ್ಯಾಂಕ್ಗಳವ್ರು ನೀನು ಕಟ್ಟಬೇಕಾದ ಇಎಂಐ ಮನ್ನಾ ಮಾಡಿಬಿಡೋದಿಲ್ಲ… ಹೀಗಾಗಿ ಹಣಕಾಸಿನ ಸಂಕಷ್ಟ ಎದುರಿಸುತ್ತಿರುವವರು ಯಾವುದೇ ಕಾರಣಕ್ಕೂ ಕೈಗೆ ಸಿಗದಂತೆ ತಪ್ಪಿಸಿಕೊಳ್ಳೋ ಪ್ರಯತ್ನ ಮಾಡಬಾರದು… ಹಾಗೆ ಮಾಡೋದ್ರಿಂದ ನಮಗೇ ಕಷ್ಟ… ಯಾಕಂದ್ರೆ ನಾವು ಸಾಲ ಮಾಡಿದ್ದೇವೆ ಅಷ್ಟೇ… ಯಾರಿಗೂ ಮೋಸ ಮಾಡಿಲ್ಲ… ಸಾಲ ಮಾಡಿ ತಲೆಮರೆಸಿಕೊಂಡರೆ ನಾವು ಸಾಲಗಾರರಷ್ಟೇ ಆಗೋದಿಲ್ಲ, ಮೋಸಗಾರರೂ ಆಗ್ತೀವಿ…

ನಾನು ನಿಮಗೆ ಇಬ್ಬರು ಬೃಹತ್ಉದ್ಯಮಿಗಳನ್ನು ಪರಿಚಯ ಮಾಡ್ತೀನಿ.. ಮೊದಲನೇ ಉದ್ಯಮಿ ವಿಜಯ ಮಲ್ಯ.. ವಿಜಯ ಮಲ್ಯ ಮದ್ಯದ ದೊರೆ ಅಂತಾನೇ ಖ್ಯಾತಿ ಪಡೆದವರು.. ಯುಬಿ ಬ್ರೀವರೀಸ್ಮಾಲೀಕರಾಗಿದ್ದರು.. ಕಿಂಗ್ಫಿಶರ್ಏರ್ಲೈನ್ಸ್ಇತ್ತು.. ಸಾವಿರಾರು ಕೋಟಿ ಆಸ್ತಿ, ಸಾವಿರಾರು ಉದ್ಯೋಗಿಗಳಿಗೆ ಸಂಬಳ ಕೊಡುತ್ತಿದ್ದರು… ಆದ್ರೆ, ಅಂತ ಆಗರ್ಭ ಶ್ರೀಮಂತನಿಗೂ ಸಂಕಷ್ಟ ಎದುರಾಯಿತು.. ಮದ್ಯದ ಸಾಮ್ರಾಜ್ಯದಲ್ಲಿ ಗಳಿಸಿದ ಹಣವನ್ನೆಲ್ಲಾ ಏರ್ಲೈನ್ಸ್ನಲ್ಲಿ ಕಳೆದುಬಿಟ್ಟರು.. ಬ್ಯಾಂಕ್ಗಳಿಂದ ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿದರು.. ಅದನ್ನು ತೀರಿಸೋದಕ್ಕೆ ಮತ್ತಷ್ಟು ಸಾಲ ಮಾಡಿದರು.. ಸಾಲ ವಿಪರೀತವಾದಾಗ ರಾತ್ರೋರಾತ್ರಿ ದೇಶ ಬಿಟ್ಟು ಪರಾರಿಯಾಗ್ಬಿಟ್ಟರು… ವಿಜಯ ಮಲ್ಯ ಎಷ್ಟೇ ಸಾಲ ಮಾಡಿದ್ದರೂ ದೇಶ ಬಿಟ್ಟು ಹೋಗುವವರೆಗೂ ಅವರು ದೊರೆಯೇ ಆಗಿದ್ದರು… ಆದ್ರೆ, ಅವ್ರು ದೇಶ ಬಿಟ್ಟು ಬೇರೊಂದು ದೇಶದಲ್ಲಿ ತಲೆಮರೆಸಿಕೊಂಡ ಮೇಲೆ ಅವರು ಚೀಟರ್ಎನಿಸಿಕೊಂಡರು…

ಇನ್ನೊಬ್ಬ ಉದ್ಯಮಿ ಅನಿಲ್ಅಂಬಾನಿ… ಅಂಬಾನಿ ಸಾಮ್ರಾಜ್ಯದ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ… ಅದ್ರಲ್ಲೂ ಅನಿಲ್ಅಂಬಾನಿ ಸಹೋದರ ಮುಖೇಶ್ಅಂಬಾನಿ ಕಾಲಿಡದ ಕ್ಷೇತ್ರವೇ ಇಲ್ಲ… ಆ ಮಟ್ಟಿಗೆ ಸಕ್ಸಸ್ಆಗಿದ್ದಾರೆ… ಆದ್ರೆ ಅನಿಲ್ಅಂಬಾನಿ ಬ್ಯುಸಿನೆಸ್ನಲ್ಲಿ ಮುಗ್ಗರಿಸಿದ್ದಾರೆ… ಅವರು ಕೈಇಟ್ಟಲ್ಲೆಲ್ಲಾ ಲಾಸ್ಆಗಿದೆ… ಸಾವಿರಾರು ಕೋಟಿ ಲಾಸ್ಆಗಿದ್ದಾರೆ… ಸಾಕಷ್ಟು ಸಾಲ ಮಾಡಿಕೊಂಡಿದ್ದಾರೆ… ಹಾಗಂತ ಅವರು ಎಲ್ಲೂ ಪರಾರಿಯಾಗಿಲ್ಲ… ಬದಲಾಗಿ ಇಲ್ಲೇ ಇದ್ದು, ಸಾಲ ತೀರಿಸೋ ಬಗೆ ಹೇಗೆ ಅನ್ನೋದರ ಬಗ್ಗೆ ಲೆಕ್ಕಾಚಾರ ಹಾಕ್ತಿದ್ದಾರೆ… ಯಾವ ಬ್ಯುಸಿನೆಸ್ಮಾಡಿದರೆ ಮಾತ್ರ ಗೆಲ್ಲಬಹುದು ಅಂತ ಹಲವಾರು ದಾರಿಗಳನ್ನು ಕಂಡುಕೊಳ್ಳುತ್ತಿದ್ದಾರೆ…

ಇಲ್ಲಿ ವಿಜಯ ಮಲ್ಯ ಹಾಗೂ ಅನಿಲ್ಅಂಬಾನಿ ಇಬ್ಬರೂ ತಮ್ಮ ಬ್ಯುಸಿನೆಸ್ಗಾಗಿ ಸಾಲ ಮಾಡಿದವರೇ… ಆದ್ರೆ ಒಬ್ಬರು ವಾಪಸ್ಕಟ್ಟೋಕೆ ಆಗದೇ ವಿದೇಶಕ್ಕೆ ಹೋಗಿ ಕೂತಿದ್ದಾರೆ… ಮತ್ತೊಬ್ಬರು ಸಾಲ ಹೆಚ್ಚಾದರೂ, ಕೋರ್ಟ್ನಲ್ಲಿ ಕೇಸ್ಗಳಾದರೂ ಇಲ್ಲೇ ಕುಳಿತು ಆಗಿರೋ ತೊಂದ್ರೆಗೆ ಪರಿಹಾರ ಹುಡುಕ್ತಿದ್ದಾರೆ… ನೀವೇ ಹೇಳಿ, ಈ ಇಬ್ಬರಲ್ಲಿ ಯಾರನ್ನು ಜನ ಆಡಿಕೊಳ್ಳುತ್ತಿದ್ದಾರೆ ಅಂತ.. ವಿಜಯ ಮಲ್ಯ ಅವರನ್ನೇ ತಾನೇ.. ಸದ್ಯ ವಿಜಯ ಮಲ್ಯ ಅವರು ನಾನು ಭಾರತಕ್ಕೆ ಬರುತ್ತೇನೆ.. ನನ್ನ ಆಸ್ತಿಗಳನ್ನು ಮಾರಾಟ ಮಾಡಿ ಎಲ್ಲವನ್ನೂ ತೀರಿಸುತ್ತೇನೆ ಎನ್ನುತ್ತಿದ್ದಾರೆ.. ಆದ್ರೆ ಯಾರೂ ನಂಬೋ ಸ್ಥಿತಿಯಲ್ಲಿ ಇಲ್ಲ..

ಅವರಿಗೆ ಅಂತಹ ಅವಕಾಶ ಕೊಡೋ ಮನಸ್ಥಿತಿಯಲ್ಲೂ ನಮ್ಮ ಕಾನೂನಿಲ್ಲ… ಹೀಗಾಗಿ, ಒಂದು ಕಾಲದಲ್ಲಿ ಯಶಸ್ವಿ ಉದ್ಯಮಿಯಾಗಿದ್ದ ವಿಜಯ ಮಲ್ಯ ಈಗ ಕಾನೂನು ತೂಗುಕತ್ತಿ ಕೆಳಗೆ ಕುಳಿತಿದ್ದಾರೆ… ಜೊತೆಗೆ ಮೋಸಗಾರನೆಂಬ ಹಣೆಪಟ್ಟಿಯನ್ನೂ ಕಟ್ಟಿಕೊಂಡಿದ್ದಾರೆ… ಆದ್ರೆ, ಅನಿಲ್ಅಂಬಾನಿ ಸಾಲಗಾರನಾಗಿ ಮಾತ್ರ ಉಳಿದಿದ್ದಾರೆ ಅಷ್ಟೇ… ಸಾಲ ಎಲ್ಲರಿಗೂ ಇರುತ್ತೆ.. ಒಂದಿಲ್ಲೊಂದು ದಿನ ತೀರಿಸೇ ತೀರಿಸ್ತೀವಿ… ಅದಕ್ಕಾಗಿ ನಾವು ವಿಜಯದ ದಾರಿಗಳನ್ನು ಹುಡುಕಿಕೊಳ್ಳಬೇಕು ಅಷ್ಟೇ… ಅದು ಬಿಟ್ಟು ನಾಟ್ರೀಚಬಲ್ಆಗುವುದು ನಮ್ಮ ಸಾಮರ್ಥ್ಯವನ್ನು ನಾವೇ ಕುಗ್ಗಿಸಿಕೊಂಡಂತೆಯೇ ಲೆಕ್ಕ…

ನಿಮಗೆ ಕ್ಯಾಪ್ಟನ್‌ ಗೋಪಿನಾಥ್‌ ಇರುತ್ತೆ… ಕ್ಯಾಪ್ಟನ್‌ ಗೋಪಿನಾಥ್‌ ಅವರು ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥೆಯನ್ನು ಸ್ಥಾಪನೆ ಮಾಡಿದ್ದರು… ಕಡಿಮೆ ದರದಲ್ಲಿ ವಿಮಾನ ಪ್ರಯಾಣ ವ್ಯವಸ್ಥೆ ಮಾಡಿಕೊಡೋದು ಇವರ ಉದ್ದೇಶವಾಗಿತ್ತು.. ಏರ್ಡೆಕ್ಕನ್ಬಂದ ಮೇಲೆ ಸಾಮಾನ್ಯ ಜನರೂ ವಿಮಾನದಲ್ಲಿ ಪ್ರಯಾಣ ಮಾಡುವಂತಾಯ್ತು… ಆದ್ರೆ ದುರದೃಷ್ಟವಶಾತ್‌ ಕ್ಯಾಪ್ಟನ್‌ ಗೋಪಿನಾಥ್‌ ಅವರ ಏರ್‌ ಡೆಕ್ಕನ್‌ ಸಂಸ್ಥೆ ನಷ್ಟಕ್ಕೆ ಸಿಲುಕಿತು… ಕೂಡಲೇ ಅವ್ರು ತಮ್ಮ ಸಂಸ್ಥೆಯನ್ನು ಮಾರಿಬಿಟ್ಟರು… ಹೆಚ್ಚಾಗುತ್ತಿದ್ದ ಸಂಕಷ್ಟದಿಂದ ಪಾರಾದರು… ಬೇರೊಂದು ಬ್ಯುಸಿನೆಸ್ಮಾಡಿಕೊಳ್ಳುತ್ತಾ ಸೇಫ್ಆದರು… ಪ್ರತಿಯೊಬ್ಬರಿಗೂ ಬೇಕಾಗಿರುವುದು ಸಂಕಷ್ಟ ಎದುರಾದಾಗ ಗೋಪಿನಾಥ್‌ ರಂತೆ ಯೋಚಿಸಿ ನಿರ್ಧಾರ ಕೈಗೊಳ್ಳಬೇಕಾದಂತಹ ಶಕ್ತಿ…

ನಾವು ನಾಟ್ರೀಚಬಲ್ಆಗೋದ್ರಿಂದ ಏನೆಲ್ಲಾ ತೊಂದರೆಗಳಾಗುತ್ತವೆ ಗೊತ್ತಾ..? ನೀವು ಒಂದು ಬ್ಯುಸಿನೆಸ್ಮಾಡ್ತಾ ಇದ್ದೀರಿ ಎಂದಿಟ್ಟುಕೊಳ್ಳಿ… ಬ್ಯುಸಿನೆಸ್ನಲ್ಲಿ ಸಾಕಷ್ಟು ಲಾಸ್ಆಗಿದೆ… ವಿಪರೀತ ಸಾಲ ಮಾಡಿಕೊಂಡಿದ್ದೀರಿ… ಈ ಪರಿಸ್ಥಿತಿ ನಿಮಗೆ ಬೇಕಂತ ಬಂದಿದ್ದಂತೂ ಅಲ್ಲ… ಈ ಹಿಂದೆ ನೀವು ಒಳ್ಳೆ ವ್ಯವಹಾರವನ್ನೇ ಮಾಡುತ್ತಿದ್ದಿರಿ, ಎಲ್ಲರಿಗೂ ಒಳ್ಳೆಯವರೇ ಆಗಿದ್ದಿರಿ.. ಆದ್ರೆ ಈಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೀರಿ… ಸಾಲ ಕೊಟ್ಟವರು ಬೆನ್ನುಬಿದ್ದಿದ್ದೀರಿ ಅಂತ ನೀವು ಮೊಬೈಲ್ಸ್ವಿಚ್ಆಫ್ಮಾಡಿಕೊಳ್ಳುತ್ತೀರಿ… ನೀವು ಮಾಡೋ ಬ್ಯುಸಿನೆಸ್ಇರುವ ಜಾಗಕ್ಕೂ ಬರೋದಿಲ್ಲ… ಮನೆಯವರಿಂದಾನೂ ದೂರ ಆಗ್ತೀರಿ…

ಇದೆಲ್ಲಾ ತಾತ್ಕಾಲಿಕವಾಗಿ ಸಾಲಗಾರರಿಂದ ತಪ್ಪಿಸಿಕೊಳ್ಳೊಕೆ ಮಾಡೋ ಟ್ರಿಕ್ಸ್ಅಷ್ಟೇ… ಹೀಗೆ, ಮಾಡೋದ್ರಿಂದ ನಿಮ್ಮ ಬ್ಯುಸಿನೆಸ್ಇನ್ನೂ ಹದಗೆಡುತ್ತೆ… ನಂಬಿ ಸಾಲ ಕೊಟ್ಟವರು ನೀವು ಕೈಗೆ ಸಿಗದಿದ್ದನ್ನು ನೋಡಿ ನಿಮ್ಮನ್ನು ಮೋಸಗಾರನ ಲಿಸ್ಟ್ಗೆ ಸೇರಿಸಿಬಿಡುತ್ತಾರೆ… ಹತ್ತಾರು ಜನಕ್ಕೆ ಹೇಳಿಕೊಂಡು ಬರುತ್ತಾರೆ… ನಾವು ಒಂದು ಆಟ ಆಡ್ತಿದ್ದೇನೆ ಅಂತ ಇಟ್ಟುಕೊಳ್ಳೋಣ.. ಆ ಆಟದಲ್ಲಿ ನಾವು ಹೀನಾಯವಾಗಿ ಸೋತು ಬಿಡುತ್ತೀವಿ… ಆಗ ನಾವು ಅಲ್ಲಿಯೇ ಇದ್ದು ಪ್ರಾಕ್ಟೀಸ್ಮಾಡುತ್ತೇವೆ… ಈಗ ಸೋತರೇನಂತೆ ಮತ್ತೊಂದು ಮ್ಯಾಚ್ಗೆಲ್ಲೋಣ ಅಂತ ಅಂದುಕೊಳ್ಳುತ್ತೇವೆ.. ಅದರ ಬದಲು ನಾನು ಸೋತಿದ್ದೇನೆ.. ಅವಮಾನ ಆಗಿದೆ.. ನಾನು ಯಾರಿಗೂ ಮುಖ ತೋರಿಸೋದಿಲ್ಲ.. ಮತ್ತೊಂದು ಮ್ಯಾಚ್ಇದ್ದಾಗ ಬಂದು ಆಡುತ್ತೇನೆ ಅಂದ್ರೆ ಯಾರು ನಿಮ್ಮನ್ನು ನಂಬುತ್ತಾರೆ..? ಹಣಕಾಸಿನ ವಿಚಾರವೂ ಹಾಗೆಯೇ..

ನೀವು ಸಾಲ ತೀರಿಸಲಾಗದೇ ಓಡಿಹೋದರೆ, ಮೊಬೈಲ್ಸ್ವಿಚ್ಆಫ್ಮಾಡಿಕೊಂಡರೆ ಸಾಲ ಕೊಟ್ಟವರಿಗೆ ಭಯ ಶುರುವಾಗುತ್ತದೆ… ಅವನು ಸಾಲ ತೀರಿಸುತ್ತಾನೋ ಇಲ್ವೋ ಅನ್ನೋ ಅನುಮಾನ ಮೂಡುತ್ತದೆ.. ಆಗ ಅವರೆಲ್ಲಾ ಹುಡುಕಾಡೋಕೆ ಶುರು ಮಾಡ್ತಾರೆ.. ಬೇಕಂತಾನೇ ಈಗ್ಲೇ ಕೊಡು ಎಂದು ಪೀಡಿಸೋಕೆ ಶುರು ಮಾಡ್ತಾರೆ… ಅದ್ರ ಬದಲಾಗಿ, ನೀವು ಎಷ್ಟೇ ಸಾಲ ಮಾಡಿದ್ದರೂ ಧೈರ್ಯವಾಗಿರಿ… ಸಾಲಗಾರರಿಗೆ ಇರುವ ವಿಚಾರವನ್ನು ಮನವರಿಕೆ ಮಾಡಿಕೊಡಿ… ಯಾವುದೋ ಪ್ರಾಜೆಕ್ಟ್ನಿಮಗೆ ಮುಂದೆ ಸಿಗುವುದಿದ್ದರೆ, ಯಾವುದೋ ಹಣ ನಿಮಗೆ ಬರುವುದಿದ್ದರೆ ಅದರ ಬಗ್ಗೆ ಸಾಲ ಕೊಟ್ಟವರಿಗೆ ಹೇಳಿ… ನಾನು ಈ ಹಿಂದೆ ತೆಗೆದುಕೊಂಡ ಸಾಲವನ್ನು ಸರಿಯಾಗಿ ತೀರಿಸಿದ್ದೇನೆ… ಈಗ ಸಮಸ್ಯೆಯಾಗಿದೆ.. ಹೀಗಾಗಿ, ಕೊಂಚ ಸಮಯ ಕೊಡಿ ತೀರಿಸುತ್ತೇನೆ ಎಂದು ಹೇಳಿ.. ನಾನು ಎಲ್ಲೂ ಓಡಿಹೋಗುವುದಿಲ್ಲ ಎಂಬ ಖಾತ್ರಿಯನ್ನು ನೀಡಿ ಆಗ ಎಂತಹವರೂ ಕೇಳೇ ಕೇಳ್ತಾರೆ…

ಇನ್ನು ನೀವು ಸಂಕಷ್ಟದಲ್ಲಿದ್ದೀರಿ ನಿಜ.. ಆದ್ರೆ, ಈ ಹಿಂದೆ ನೀವು ಮಾಡಿಕೊಟ್ಟ ಕೆಲಸದಿಂದಾಗಿ ಖುಷಿಯಾದ ಗ್ರಾಹಕರು ಒಂದಷ್ಟು ಜನ ಇದ್ದೇ ಇರುತ್ತಾರೆ… ಅವರಿಗೆ ನಿಮ್ಮ ಅವಶ್ಯಕತೆ ಈಗ ಬಂದಿರಬಹುದು.. ಅದಕ್ಕಾಗಿ ಅವರು ನಿಮಗೆ ಕರೆ ಮಾಡಬಹುದು.. ಅಂತಹ ಸಂದರ್ಭದಲ್ಲಿ ನಿಮ್ಮ ಫೋನ್ಸ್ವಿಚ್ಆಫ್ಇದ್ದರೆ, ನಿಮ್ಮ ಜಾಗದಲ್ಲೂ ನೀವು ಸಿಗದೇ ಹೋದರೆ ಆ ಕೆಲಸವನ್ನು ಅವರು ಬೇರೊಬ್ಬರಿಗೆ ಕೊಟ್ಟುಬಿಡುತ್ತಾರೆ.. ಇನ್ನು ಸಂಕಷ್ಟದಲ್ಲಿರುವ ನಿಮಗೆ ಯಾರೋ ನಿಮ್ಮ ಆಪ್ತರೊಬ್ಬರು ಸಹಾಯ ಮಾಡಬೇಕು ಎಂದುಕೊಳ್ಳುತ್ತಾರೆ… ಅದಕ್ಕಾಗಿ ಅವರು ನಿಮಗೆ ಕರೆ ಮಾಡುತ್ತಿರುತ್ತಾರೆ..

ಆದ್ರೆ ನೀವು ನಾಟ್ರೀಚಬಲ್ಆಗಿದ್ದರೆ, ಬರೋ ಆ ಸಹಾಯವೂ ಸಿಗೋದಿಲ್ಲ… ಹೀಗಾಗಿ, ಹಣಕಾಸಿನ ಸಂಕಷ್ಟ ಇದ್ದಾಗ ನಾವು ಓಡಿಹೋಗಬಾರದು.. ಬದಲಾಗಿ, ಇರೋ ವಿಚಾರವನ್ನು ಮನವರಿಕೆ ಮಾಡಿಕೊಡಬೇಕು… ನನಗೆ ಈ ರೀತಿ ಅವಕಾಶ ಮಾಡಿಕೊಟ್ಟರೆ ನಾನು ಹಂತಹಂತವಾಗಿ ನಿಮ್ಮ ಸಾಲ ತೀರಿಸುತ್ತೇನೆ.. ಈಗ ಮಾಡುತ್ತಿರುವ ಬ್ಯುಸಿನೆಸ್ಲಾಸ್ಆಗಿದೆ.. ಮುಂದೆ ಇಂತಹ ಪ್ರಾಜೆಕ್ಟ್ಗಳು ಸಿಗೋದಿದೆ.. ಇಲ್ಲದಿದ್ದರೆ ಬೇರೆ ಬ್ಯುಸಿನೆಸ್ಶುರು ಮಾಡ್ತಾ ಇದೀನಿ.. ಅದ್ರಿಂದ ನಮ್ಮ ಕಷ್ಟ ತೀರುತ್ತೆ ಅನ್ನೋ ನಂಬಿಕೆ ಇದೆ ಅಂತ ಧೈರ್ಯವಾಗಿ ಹೇಳಿ… ಆಗ ಎಲ್ಲರೂ ನಿಮಗೆ ಅವಕಾಶ ಕೊಡುತ್ತಾರೆ… ಸಾಲ ಕೊಟ್ಟವರಿಗೆ ನಿಮ್ಮ ಮೇಲೆ ನಂಬಿಕೆ ಹೋದಾಗ ಮಾತ್ರವೇ ಅವರು ನಿಮ್ಮ ಮೇಲೆ ಹೆಚ್ಚು ಒತ್ತಡ ಹೇರುತ್ತಾರೆ ಅನ್ನೋದನ್ನ ಮರೆಯಬೇಡಿ… ಸೋ.. ತಲೆಮರೆಸಿಕೊಳ್ಳಬೇಡಿ.. ತಲೆ ಎತ್ತಿ ಸಮಸ್ಯೆಗೆ ಪರಿಹಾರ ಹುಡುಕೋ ಪ್ರಯತ್ನ ಮಾಡಿ…

Share Post