ಈ ಮೀನು ಹಾರಬಲ್ಲದು, ಈಜಬಲ್ಲದು, ನಡೆಯಬಲ್ಲದು!
ಮೀನು ನೀರಿನಲ್ಲೇ ಇರುತ್ತದೆ.. ನೀರು ಬಿಟ್ಟು ಹೊರಗೆ ಬಂದರೆ ಕೆಲ ಸಮಯದಲ್ಲೇ ಅದು ಸಾಯುತ್ತದೆ.. ಅದಕ್ಕಿರುವ ಸಣ್ಣ ರೆಕ್ಕೆಗಳು ಹಾಗೂ ಬಾಲದ ಸಹಾಯದಿಂದ ಅದು ನೀರಿನಲ್ಲಿ ಈಜುತ್ತದೆ.. ಆದ್ರೆ ಇಲ್ಲೊಂದು ಮೀನಿದು.. ಇದು ಅತ್ಯಂತ ವಿಶೇಷ.. ಯಾಕಂದ್ರೆ ಇದು ನೀರಿನಲ್ಲಿ ಈಜುತ್ತದೆ.. ಅಗತ್ಯ ಬಿದ್ದರೆ ಹಕ್ಕಿಗಳಂತೆ ಹಾರುತ್ತದೆ.. ಇನ್ನೂ ಅಗತ್ಯ ಎನಿಸಿದಾಗ ನೀರಿನಿಂದ ಹೊರಬಂದು ಭೂಮಿ ಮೇಲೆ ಸ್ವಲ್ಪ ನಡೆಯಲೂ ಬಲ್ಲದು..
ಈ ಮೀನು ಕ್ಯಾಲಿಫೋರ್ನಿಯಾ ಕರಾವಳಿ ತೀರದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.. ಇದನ್ನು ಮೊಬುಲಾ ಬೀಮ್ ಅಥವಾ ಫ್ಲೈಯಿಂಗ್ ಬೀಮ್ ಎಂದು ಕರೆಯುತ್ತಾರೆ.. ಆಡು ಭಾಷೆಯಲ್ಲಿ ಇದನ್ನು ಗರ್ನೈ ಫಿಶ್ (ಹಾರುವ ಮೀನು) ಎನ್ನುತ್ತಾರೆ.. ಇದು 50 ರಿಂದ 200 ಮೀಟರ್ ಎತ್ತರದವರೆಗೂ ಹಾರುತ್ತದೆ ಎಂದು ತಿಳಿದುಬಂದಿದೆ.. ಸಾಮಾನ್ಯವಾಗಿ ಈ ಮೀನಿನ ಗಾತ್ರ ಸುಮಾರು 12 ಇಂಚುಗಳಷ್ಟಿದ್ದರೂ, ಕೆಲವೊಂದು 20 ಇಂಚಿನವರೆಗೂ ಬೆಳೆಯುತ್ತವೆ..
ಒಂದು ಕೆಜಿವರೆಗೂ ತೂಕ ಬರುವ ಈ ಮೀನುಗಳು ಸಣ್ಣ ಮೀನುಗಳನ್ನು, ಸಸ್ಯಗಳನ್ನು ತಿಂದು ಬದುಕುತ್ತವೆ.. ಸಂತಾನೋತ್ಪತ್ತಿ ಸಮಯದಲ್ಲಿ ನೀರಿನಿಂದ ಹೊರಬರುವ ಈ ಮೀನುಗಳು ಹುಲ್ಲು ಅಥವಾ ಕಸದ ರಾಶಿಯಲ್ಲಿ ಮೊಟ್ಟೆಗಳನ್ನಿಡುತ್ತವೆ.. ಈ ಸಮಯದಲ್ಲಿ ಈ ಮೀನುಗಳು ಕೊಂಚ ದೂರದವರೆಗೆ ನಡೆಯುತ್ತವೆ ಎಂದು ಹೇಳಲಾಗುತ್ತದೆ.. ಹೀಗಾಗಿ ಈ ಗರ್ನೈ ಮೀನುಗಳು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿವೆ..