ನಟಿ ಪವಿತ್ರಾ ಲೋಕೇಶ್ ಪಿಹೆಚ್ಡಿ ಮಾಡುವ ಆಸೆಗೆ ಬಲ; ಪರೀಕ್ಷೆಯಲ್ಲಿ ಪಾಸ್
ಹಂಪಿ; ಇತ್ತೀಚೆಗೆ ವಿವಾದದಿಂದಾಗಿ ಹೆಚ್ಚು ಚರ್ಚೆಯಲ್ಲಿರುವ ನಟಿ ಪವಿತ್ರಾ ಲೋಕೇಶ್ ಅವರು ಪಿಹೆಚ್ಡಿ ಮಾಡುವ ಕನಸು ಕಂಡಿದ್ದರು. ಅದು ನನಸಾಗೋದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಪಿಎಚ್ಡಿ ಪ್ರವೇಶ ಪರೀಕ್ಷೆಯಲ್ಲಿ ಅವರು ಪಾಸ್ ಆಗಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯ ನಡೆಸಿದ ಪಿಎಚ್ಡಿ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಪವಿತ್ರಾ ಪಾಸ್ ಆಗಿದ್ದಾರೆ.
ನಟಿ ಪವಿತ್ರಾ ಲೋಕೇಶ್ ಸೇರಿದಂತೆ 259 ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. 981 ಜನರು ಪ್ರವೇಶ ಪರೀಕ್ಷೆ ಬರೆದಿದ್ದರು. ಆದ್ರೆ ಇದರಲ್ಲಿ ಕಾಲು ಭಾಗದವರು ಮಾತ್ರ ಉತ್ತೀರ್ಣರಾಗಿದ್ದಾರೆ.