BengaluruCinemaPolitics

ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದ ಕೊನೆಯ ಸಂಚಿಕೆಯಲ್ಲಿ ಡಿ.ಕೆ.ಶಿವಕುಮಾರ್

ಬೆಂಗಳೂರು; ಈ ಶನಿವಾರ ಹಾಗೂ ಭಾನುವಾರ ಪ್ರಸಾರವಾಗುವ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಲ್ಲಿ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅತಿಥಿಯಾಗಿದ್ದಾರೆ. ಇದು ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದ ಕೊನೆಯ ಸಂಚಿಕೆಯಾಗಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ. ಈಗಾಗಲೇ ಈ ಕಾರ್ಯಕ್ರಮದ ಪ್ರೋಮೋಗಳು ರಿಲೀಸ್‌ ಆಗಿದ್ದು, ಮಿಲಿಯನ್‌ಗಟ್ಟಲೆ ವೀಕ್ಷಣೆಗಳಾಗಿವೆ.

ಡಿ.ಕೆ.ಶಿವಕುಮಾರ್‌ ತಮ್ಮ ಬದುಕಿಗೆ ಸಂಬಂಧಿಸಿದ ಹಲವಾರು ಕುತೂಹಲದ ವಿಷಯಗಳನ್ನು ಹೇಳಿದ್ದಾರೆ. ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಸಂಸ್ಕೃತದ ಶ್ಲೋಕಗಳನ್ನು ಹೇಳುವ ಮೂಲಕ ಅದಕ್ಕೆ ಅರ್ಥವನ್ನೂ ಹೇಳಿದ್ದಾರೆ. ಪ್ರೋಮೋ ಒಂದರಲ್ಲಿ ಇದನ್ನು ಬಳಸಿಕೊಂಡಿದ್ದರು. ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿದೆ.

ರಾಜಕೀಯದ ಬ್ಯುಸಿ ಷೆಡ್ಯುಲ್‌ಗಳ ಮಧ್ಯೆ ಲೈಫ್‌ನ ರಿಕಾಲ್‌ ಮಾಡಲು 5 ನೇ ಸೀಸನ್‌ನ 100 ನೇ ಸಾಧಕರಾಗಿ ಹಾಟ್ ಸೀಟ್ ನಲ್ಲಿ ಡಿ.ಕೆ. ಶಿವಕುಮಾರ್ ಕೂತಿದ್ದಾರೆ. ಕಾಡಿನಲ್ಲಿ ಬೇಕಾದಷ್ಟು ಪ್ರಾಣಿಗಳಿವೆ. ಸಿಂಹಕ್ಕೆ ಯಾರೂ ಮೃಗರಾಜ ಎಂದು ಹೆಸರಿಟ್ಟಿಲ್ಲ. ಅದಕ್ಕೆ ಯಾರೂ ಪಟ್ಟಾಭಿಷೇಕ ಮಾಡಿಲ್ಲ. ತನ್ನ ಶಕ್ತಿ ಹಾಗೂ ಸಾಮರ್ಥ್ಯದಿಂದ ಅದು ಮೃಗರಾಜ ಎನಿಸಿಕೊಂಡಿದೆ ಎಂಬ ಅವರ ಮಾತು ಸಾಕಷ್ಟು ಜನರ ಗಮನ ಸೆಳೆದಿದೆ.

ತಮ್ಮದೇ ಆದ ವಿಭಿನ್ನ ಮಾತಿನ ಶೈಲಿಯನ್ನು ರೂಡಿಸಿಕೊಂಡಿರುವ ಡಿ.ಕೆ.ಶಿವಕುಮಾರ್‌ ಅವರು ಈ ಕಾರ್ಯಕ್ರಮದಲ್ಲಿ ಹಲವಾರು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಹೀಗಾಗಿ ಅವರು ಕಾರ್ಯಕ್ರಮವನ್ನು ನೋಡಲು ಜನರು ಕಾತುರದಿಂದ ಕಾಯುತ್ತಿದ್ದಾರೆ.

 

Share Post