CrimeNational

ವಿಮಾನದಲ್ಲಿ ಕುಳಿತು ಬಾಂಬ್‌ ಬಗ್ಗೆ ಮಾತು; ಪ್ರಯಾಣಿಕ ಅರೆಸ್ಟ್‌

ನವದೆಹಲಿ; ದುಬೈಗೆ ಹೋಗುವ ವಿಮಾನದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಫೋನ್‌ನಲ್ಲಿ ಬಾಂಬ್‌ ಬಗ್ಗೆ ಮಾತನಾಡಿದ್ದಾನೆ. ಇದನ್ನು ಕೇಳಿದ ಸಹ ಪ್ರಯಾಣಿಕರು ದೂರು ಕೊಟ್ಟಿದ್ದು, ಆತನನ್ನು ಅರೆಸ್ಟ್‌ ಮಾಡಿರುವ ಘಟನೆ ದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಆರೋಪಿ ಉತ್ತರ ಪ್ರದೇಶದ ಪಿಲಿಭಿತ್ ನಿವಾಸಿ ಅಜೀಂ ಖಾನ್ ಎಂದು ತಿಳಿದುಬಂದಿದೆ. ವಿಸ್ತಾರ ವಿಮಾನ ಸಂಖ್ಯೆ ಯುಕೆ-981ರಲ್ಲಿ ದುಬೈಗೆ ಪ್ರಯಾಣಿಸಬೇಕಿತ್ತು. ಈ ಸಂದರ್ಭದಲ್ಲಿ ಆರೋಪಿ ತನ್ನ ಫೋನ್‌ನಲ್ಲಿ ಬಾಂಬ್ ವಿಚಾರ ಮಾತನಾಡಿದ್ದಾನೆ. ಇದನ್ನು ಕೇಳಿಸಿಕೊಂಡ ಮಹಿಳೆಯೊಬ್ಬರು ವಿಮಾನದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾಳೆ. ಕೂಡಲೇ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ಪೊಲೀಸರಿಗೊಪ್ಪಿಸಿದ್ದಾರೆ. ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ.

Share Post