BengaluruCrime

ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ; 24 ಯುವತಿಯರ ರಕ್ಷಣೆ

ಬೆಂಗಳೂರು; ಬೆಂಗಳೂರಿನಲ್ಲಿ ವೇಶ್ಯಾವಾಟಿಕೆ ಚಟುವಟಿಕೆಗಳು ನಿಲ್ಲುತ್ತಲೇ ಇಲ್ಲ. ಅದು ಮುಂದುವರೆದೇ ಇದೆ. ಪೊಲೀಸರು ಆಗಾಗ ದಾಳಿ ಮಾಡುತ್ತಿದ್ದರೂ, ಅನೈತಿಕ ಚಟುವಟಿಕೆಗಳು ಮುಂದವರೆದೇ ಇವೆ. ಇಂದೂ ಕೂಡಾ ಪೊಲೀಸರು ವೇಶ್ಯಾವಾಟಿಕೆ ಅಡ್ಡೆಯೊಂದರ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ 24 ಯುವತಿಯರನ್ನು ರಕ್ಷಣೆ ಮಾಡಲಾಗಿದೆ. 9 ಆರೋಪಿಗಳನ್ನು ಅರೆಸ್ಟ್‌ ಮಾಡಲಾಗಿದೆ.

ಸಿಸಿಬಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಜ್ಞಾನಭಾರತಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಸಿಸಿಬಿಗೆ ಸಿಕ್ಕಿತ್ತು. ಅದನ್ನು ಖಚಿತಪಡಿಸಿಕೊಂಡು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ 24 ಯುವತಿಯರು ಸಿಕ್ಕಿದ್ದಾರೆ. ಅವರನ್ನು ವಿವಿಧ ಭಾಗಗಳಿಂದ ಕರೆತರಲಾಗಿತ್ತು ಎಂದು ತಿಳಿದುಬಂದಿದೆ. ಯುವತಿಯರಿಗೆ ಕೆಲಸ ಕೊಡಿಸುವ ಆಮಿಷವೊಡ್ಡಿ ಬೇರೆ ಬೇರೆ ರಾಜ್ಯಗಳಿಂದ ಯುವತಿಯರನ್ನು ಇಲ್ಲಿಗೆ ಕರೆತಂದಿದ್ದರು. ನಂತರ ಅವರನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ನೂಕಲಾಗಿತ್ತು.

Share Post