ತಿಂಗಳ ಅಂತ್ಯಕ್ಕೆ ಕೊರೊನಾ ಸೋಂಕು ಅಧಿಕವಾಗಲಿದೆ: ಅಶೋಕ್
ಬೆಂಗಳೂರು: ದಿನದಿನಕ್ಕೂ ರಾಜ್ಯದಲ್ಲಿ ಕೊರೊನ ಪ್ರಕರನಗಳು ಅಧಿಕವಾಗುತ್ತಲೇ ಇವೆ. ಈ ತಿಂಗಳ ಅಂತ್ಯಕ್ಕೆ ಅಂದರೆ ಜನವರಿ 25 ರ ಬಳಿಕ ಸೋಂಕು ಇನ್ನೂ ಅಧಿಕವಾಗಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಕೆಯನ್ನು ನೀಡಿದ್ದಾರೆ.
ರಾಜ್ಯದಲ್ಲಿ ಲಸಿಕಾ ಅಭಿಯಾನ ಭರದಿಂದ ಸಾಗುತ್ತಿದೆ. ಹಾಗಾಗಿ ಸೋಂಕು ಸ್ವಲ್ಪ ಮಟ್ಟಿಗೆ ಕಡಿಮೆಯಿದೆ. ಕೇಂದ್ರ ಸರ್ಕಾರ ಲಸಿಕೆ ಶುರು ಮಾಡದಿದ್ದಲ್ಲಿ ಈ ಹೊತ್ತಿಗೆ ಅಪಾರ ಸಾವು-ನೋವುಗಳು ಉಂಟಾಗುತ್ತಿದ್ದರಲ್ಲಿ ಆನುಮಾನವೇ ಇಲ್ಲ.
ಈಗಾಗಲೇ ರಾಜ್ಯದಲ್ಲಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಜಾರಿ ಮಾಡಿದ್ದೇವೆ. ಈ ನಿಯಮಗಳು ಜನವರಿ 21ರವೆರೆಗೆ ಜಾರಿಯಲ್ಲಿರಲಿದೆ. ಬಳಿಕ ಸಭೆ ನಡೆಸಿ ಮುಂದಿನ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು ಆದರೆ ಲಾಕ್‌ಡೌನ್ ಬಗ್ಗೆ ಯಾವುದೇ ನಿರ್ಧಾರ ಇಲ್ಲ ಎಂದು ಸ್ಪಷ್ಟಪಡಿಸಿದ್ರು.