ಮಕ್ಕಳ ಸಾವಿಗೆ ನರ್ಸ್ ಬೇಜಾವಾಬ್ದಾರಿ ಕಾರಣ: ಇಬ್ಬರ ಅಮಾನತು
ಬೆಳಗಾವಿ: ರುಬೆಲ್ಲಾ ವ್ಯಾಕ್ಸಿನ್ ಪಡೆದು ಮೂರು ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನರ್ಸ್ ಮತ್ತು ಫಾರ್ಮಾಸಿಸ್ಟ್ ಇಬ್ಬರನ್ನು ಅಮಾನತು ಮಾಡಲಾಗಿದೆ. ಹಸುಳೆಗಳ ದುರಂತ ಸಾವಿಗೆ ಇವರಿಬ್ಬರ ನಿರ್ಲಕ್ಷ್ಯವೇ ಕಾರಣ ಎಂದು ವರದಿಯಲ್ಲಿ ಸಿಬ್ಬಂದಿಯ ಬೇಜಾವಾಬ್ದಾರಿ ನಡವಳಿಕೆಯೇ ಕಾರಣ ಎಂದು ಸಾಬೀತಾದ್ದರಿಂದ ಸಲೀಮಾ ಮಹಾತ್, ಫಾರ್ಮಸಿಸ್ಟ್ (pharmacist) ಜಯರಾಜ್ ಕುಂಬಾರ್ ಅವರನ್ನು ಅಮಾನತು ಮಾಡಲಾಗಿದೆ.
ಈ ಪ್ರಕರಣದಲ್ಲಿ ವೈದ್ಯಾಧಿಕಾರಿ ತಪ್ಪು ಕಂಡು ಬಂದರೆ ಅವರಿಗೂ ನೊಟೀಸ್ ನೀಡಲಾಗುವುದು ಎಂದು ಡಿಎಚ್‌ಓ ತಿಳಿಸಿದ್ದಾರೆ. ಲಸಿಕಾಕರಣ ಕಾರ್ಯಕ್ರಮದಲ್ಲಿ ನರ್ಸ್ ಮತ್ತು ಫಾರ್ಮಾಸಿಸ್ಟ್ ಭಾಘಿಯಾಗಿರಲಿಲ್ಲ ಈ ಕುರಿತು ಪ್ರಶ್ನೆ ಮಾಡಿ ಅಮಾನತು ಮಾಡಲಾಗಿದೆ ಎಂದು ತನಿಖಾಧಿಕಾರಿ ಈಶ್ವರ್ ಗಡಾದ್ ತಿಳಿಸಿದ್ರು.
ನರ್ಸ್ ಬೇಜಾವಾಬ್ದಾರಿಯುತ ನಡವಳಿಕೆಗೆ 23 ಕಂದಮ್ಮಗಳ ಪ್ರಾಣ ಆಪತ್ತಿನಲ್ಲಿ ಸಿಲುಕಿತ್ತು. ಆದರೆ ಅದೃಷ್ಟವಶಾತ್ ಇಪ್ಪತ್ತು ಮಕ್ಕಳಿಗೆ ಗಂಭೀರವಾದ ಸಮಸ್ಯೆ ಕಾಣಿಸಿಕೊಂಡಿಲ್ಲ. ಯಾಕಂದ್ರೆ ಲಸಿಕೆ ಸಮಯದಲ್ಲಿ ನರ್ಸ್ ಆಸ್ಪತ್ರೆಗೆ ತೆರಳದೆ ಆಶಾ ಕಾರ್ಯಕರ್ತೆಯರನನು ಕಳಿಸಿ ತಪ್ಪೆಸಗಿದ್ದಾರೆ. ಅಷ್ಟೇ ಅಲ್ಲದೆ ಲಸಿಕೆಯನ್ನು ಫ್ರಿಡ್ಜ್‌ನಲ್ಲಿ ಅಡುಗೆ ಸಾಮಗ್ರಿಗಳ ಪಕ್ಕದಲ್ಲಿ ಇಟ್ಟಿದ್ದಾರೆ. ಎರಡು ದಿನಗಳ ಬಳಿಕ ಆ ಲಸಿಕೆಯನ್ನು ಮಕ್ಕಳಿಗೆ ನೀಡಲಾಗಿದೆ. ಅದರಲ್ಲಿ ಮೂವರು ಮಕ್ಕಳಿಗೆ ತೀವ್ರ ವಾಂತಿ ಭೇದಿಯಾಗಿ ಅಸುನೀಗಿದ್ದಾರೆ. ಅದೃಷ್ಟವಶಾತ್ ಉಳಿದ ಇಪ್ಪತ್ತು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿವೆ.
ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಡಿಎಚ್‌ಓ ಶಶಿಕಾಂತ ಮುನ್ಯಾಳ ಮಕ್ಕಳ ಸಾವಿಗೆ ಸಂಬಂಧಿಸಿದಂತೆ ಮೆಡಿಕಲ್ ಪ್ರೊಸಿಜರ್‌ನಲ್ಲಿ ಮೃತ ಮಕ್ಕಳ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಮಾಹಿತಿಯಿಲ್ಲ ಎಂದಿದ್ದಾರೆ. ಸಾವಿನ ಬಗ್ಗೆ ಹೆಚ್ಚಿನ ತನಿಖೆಗಾಗಿ ಸುಧಾಕರ್ ಸೂಚನೆ ಮೇರೆಗೆ ಇಬ್ಬರು ಹಿರಿಯ ತನಿಖಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮಕ್ಕಳಿಗೆ ಲಸಿಕೆ ನೀಡುವ ವೇಳೆ ಮಾರ್ಗಸೂಚಿ ಪಾಲನೆ, ಕೋಲ್ಡ್ ಚೈನ್ ಬ್ರೇಕ್ ಆಗಿರುವ ವಿಚಾರವಾಗಿ ತನಿಖೆ ನಡೆಯಲಿದೆ. ಎರಡು ದಿನಗಳಲ್ಲಿ ವರದಿ ನೀಡುವಂತೆ ಡಬ್ಲ್ಯೂಎಚ್‌ಓ ಅಧಿಕಾರಿ ಡಾ.ಸಿದ್ದಲಿಂಗಯ್ಯ, ಡಾ.ಪ್ರಭು ಬಿರಾದಾರ ಅವರಿಗೆ ಆದೇಶಿಸಿದ್ದಾರೆ.