CrimeNational

ಕಾರಿನಲ್ಲಿ ಇಬ್ಬರು ಯುವತಿಯರ ಜೊತೆ ಯುವಕನ ರೊಮ್ಯಾನ್ಸ್‌!

ಲಕ್ನೋ(Lakhnow); ಭಾರತೀಯ ಸಮಾಜ ಮುಂದುವರೆದಷ್ಟು ವಿದೇಶಿ ಸಂಸ್ಕೃತಿ ಹೆಚ್ಚಾಗುತ್ತಿವೆ.. ವಿದೇಶಿ ಸಂಸ್ಕೃತಿಯನ್ನು ಪಾಲಿಸುವವರು, ನಮ್ಮ ಸಂಸ್ಕೃತಿಗೆ ಮಸಿ ಬಳಿಯುವವರು ಬೀದಿಬೀದಿಗೂ ಸಿಗುತ್ತಾರೆ.. ಇತ್ತೀಚೆಗೆ ಉಡುಪಿಯಲ್ಲಿ ಜೋಡಿಯೊಂದು ಕಾರಿನಲ್ಲೇ ಸೆಕ್ಸ್‌ ಮಾಡುತ್ತಾ ಸಿಕ್ಕಿಬಿದ್ದಿತ್ತು.. ಇದೀಗ ಉತ್ತರ ಪ್ರದೇಶದಲ್ಲಿ ಅಂತಹದ್ದೇ ಒಂದು ಘಟನೆ ನಡೆದಿದೆ..

ಇದನ್ನೂ ಓದಿ; Pistol lady; ಪಾತ್ರೆಯಲ್ಲ, ಪಿಸ್ತೂಲ್‌ ತೊಳೆಯುತ್ತಾಳೆ ಈ ಮಹಿಳೆ!

ಕಾರಿನಲ್ಲಿ ಕೂತಿದ್ದ ಯುವಕನೊಬ್ಬ ಇಬ್ಬರು ಯುವತಿಯರ ಜೊತೆ ರೊಮ್ಯಾನ್ಸ್‌ ಮಾಡುತ್ತಾ ಸಿಕ್ಕಿಬಿದ್ದಿದ್ದಾನೆ.. ಉತ್ತರ ಪ್ರದೇಶದ ಬಾರಾಬಂಕಿ ಭಾಗದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ..

ಇದನ್ನೂ ಓದಿ; Headache; ಕ್ಷಣಗಳಲ್ಲಿ ತಲೆನೋವು ಕಡಿಮೆಯಾಗಬೇಕಾ..?

ಅಯೋಧ್ಯಾ ಹಾಗೂ ಲಕ್ಮೋ ರಾಷ್ಟ್ರೀಯ ಹೆದ್ದಾರಿಯ ಅಸೇನಿ ಎಂಬಲ್ಲಿ ಕಾರು ಸೈಡ್‌ಗೆ ನಿಲ್ಲಿಸಿ ಯುವಕನೊಬ್ಬ ಇಬ್ಬರು ಯುವತಿಯರೊಂದಿಗೆ ರೊಮ್ಯಾನ್ಸ್‌ ಮಾಡುತ್ತಿದ್ದದ್ದು ಕಂಡುಬಂದಿದೆ.. ಕಾರಿನ ಮೇಲೆ ಬಿಜೆಪಿ ಪಕ್ಷದ ಧ್ವಜ ಇರುವುದು ಕೂಡಾ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ.. ಕಾರು ಉತ್ತರ ಪ್ರದೇಶದಲ್ಲಿ ನೋಂದಣಿಯಾಗಿದ್ದು, ಅದರ ನಂಬರ್‌ ಯುಪಿ-33 ಎಎಲ್-0011 ಎಂದು ತಿಳಿದುಬಂದಿದೆ.. ಹೆದ್ದಾರಿ ಪಕ್ಕದಲ್ಲಿ ಕಾರು ನಿಲ್ಲಿಸಿ ಅದರೊಳಗಿದ್ದವರು ಪರಸ್ಪರ ಕಿಸ್‌ ಮಾಡಿದ್ದಾರೆ.. ದಾರಿಹೋಕರು ಇದನ್ನು ನೋಡಿ ಯಾರಿಗೂ ಗೊತ್ತಿಲ್ಲದಂತೆ ವಿಡಿಯೋ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ; ಶನಿಯಿಂದ ಮುಕ್ತಿ ಪಡೆಯಲು ಶನಿಪ್ರದೋಷ ವ್ರತ!

Share Post