National

ಫಸ್ಟ್‌ ಇನ್‌ ಕ್ಲಾಸ್‌ ಎಡ್ಯೂಟೆಕ್‌ನೊಂದಿಗೆ ರೋಟರಿ ಇಂಡಿಯಾ ಲಿಟ್ರಸಿ ಮಿಷನ್‌ ಒಪ್ಪಂದ: ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ

ನವದೆಹಲಿ: ಫಸ್ಟ್ ಇನ್ ಕ್ಲಾಸ್ ಎಡ್ಯೂಟೆಕ್ ವೇದಿಕೆಯು ರೋಟರಿ ಇಂಡಿಯಾ ಲಿಟರಸಿ ಮಿಷನ್‌ನೊಂದಿಗೆ ಬಹುದೊಡ್ಡ ಒಪ್ಪಂದವೊಂದಕ್ಕೆ ಸಹಿ ಹಾಕಿದೆ. ಭಾರತದಲ್ಲಿ ಅತಿದೊಡ್ಡ ಉಚಿತ ವೆಚ್ಚದ ಎಜುಟೆಕ್ ಸಂಸ್ಥೆ ರಚಿಸಲು MOUಗೆ ಸಹಿ ಹಾಕಿದ್ದು, ಒಪ್ಪಂದದ ಅನ್ವಯ ಒಂದು ಲಕ್ಷ ಟ್ಯಾಬ್ಲೆಟ್‌ಗಳನ್ನು ಉಚಿತವಾಗಿ ವಿತರಿಸಲಾಗುವುದು. ಕ್ರಿಯಾತ್ಮಕ ಕಲಿಕೆಗಾಗಿ ಈ ಟ್ಯಾಬ್ಲೆಟ್ ಉಪಯೋಗವಾಗುವುದು. ಅಲ್ಲದೇ ಕಲಿಕೆಯಲ್ಲಿನ ವೇಗ ಹೆಚ್ಚಿಸಲು ಇದು ಸಹಕಾರಿ. ಇವು ಸಂಪೂರ್ಣ ಕ್ರಿಯಾತ್ಮಕ ಇ-ಲರ್ನಿಂಗ್ ಪ್ಲಾಟ್‌ಫಾರ್ಮ್‌ಗಳೊಂದಿಗೆ ಲೋಡ್ ಆಗುತ್ತವೆ ಮತ್ತು ಫಸ್ಟ್ ಇನ್ ಕ್ಲಾಸ್‌ನಿಂದ ಉಚಿತ ಶಿಕ್ಷಣವನ್ನೂ ಒದಗಿಸಲಾಗುತ್ತದೆ.

ಶಿಕ್ಷಣ ಕೇತ್ರದಲ್ಲಿರುವ ಬೋಧನಾ ವಿಧಾನಗಳನ್ನು ಬಳಸಿಕೊಂಡು ಪಠ್ಯಕ್ರಮ ರಚಿಸಲು ಹಲವು ವರ್ಷಗಳಿಂದ ಸಂಶೋಧನೆ ಮತ್ತು ಕಠಿಣ ಪರಿಶ್ರಮದ ಫಲವಾಗಿ ಇಂದಿನ ಈ ಯೋಜನೆ ಸಿದ್ಧವಾಗಿದೆ ಎಂದು ʻಐಟಿವಿ ನೆಟ್‌ವರ್ಕ್‌ ಸಂಸ್ಥಾಪಕ ಕಾರ್ತಿಕೇಯ ಶರ್ಮಾʼ ತಿಳಿಸಿದ್ರು. ಇದು ವಿದ್ಯಾರ್ಥಿಗಳಿಗೆ ಕಲಿಯಲು ಸಂಪೂರ್ಣ ಸಹಕಾರಿಯಾಗುತ್ತದೆ ಎಂದು ತಿಳಿಸಿದ್ರು.

ಭಾರತ ಸ್ವಾತಂತ್ರ್ಯದ 75ನೇ ವರ್ಷದ ಸಂದರ್ಭದಲ್ಲಿ ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿದ್ದಾರೆ. ಇದರ ವಿಶೇಷತೆಗಳ ಈ ಕೆಳಕಂಡಂತಿವೆ.
೧. ಒಂದು ಲಕ್ಷ ಹುತಾತ್ಮರ ಕುಟುಂಬಗಳಿಗೆ ಉಚಿತ ಶಿಕ್ಷಣ ವೇದಿಕೆ
೨. ಸಶಸ್ತ್ರ ಮತ್ತು ಪೊಲೀಸ್ ಪಡೆಗಳ ಹುತಾತ್ಮರ ಕುಟುಂಬಗಳಿಗೆ ಲಕ್ಷ ಟ್ಯಾಬ್ಲೆಟ್ ಹಾಗೂ ಪಿಸಿ ವಿತರಣೆ
೩. ಕೊರೊನಾ ವಾರಿಯರ್ಸ್‌ಗೂ ಈ ಸವಲತ್ತು ಸಿಗಲಿದೆ.

ರೋಟರಿ ಇಂಡಿಯಾ ಲಿಟರಸಿ ಮಿಷನ್ ಮತ್ತು ಫಸ್ಟ್ ಇನ್ ಕ್ಲಾಸ್ ಎಡ್ಯೂಟೆಕ್ ಪ್ಲಾಟ್‌ಫಾರ್ಮ್ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇ-ಲರ್ನಿಂಗ್ ಮತ್ತು ಲೈವ್ ಟೀಚಿಂಗ್ ಅನ್ನು ಉಚಿತವಾಗಿ ನೀಡಲಾಗುವುದು
ಭಾರತ ಮತ್ತು ವಿಶ್ವ ಮಟ್ಟದಲ್ಲಿ ಅತಿದೊಡ್ಡ ಸರ್ಕಾರೇತರ ಉಚಿತ ಇ-ಲರ್ನಿಂಗ್ ಸಂಸ್ಥೆಯಾಗಿ ಹೊರಹೊಮ್ಮಿದೆ. ಹಿಂದಿ, ಇಂಗ್ಲಿಷ್, ತಮಿಳು, ಕನ್ನಡ, ಪಂಜಾಬಿ, ಬೆಂಗಾಲಿ ಮತ್ತು 6 ಇತರ ಪ್ರಾದೇಶಿಕ ಭಾಷೆಗಳಲ್ಲಿ ಪ್ಲಾಟ್‌ಫಾರ್ಮ್ ಲಭ್ಯವಿರುತ್ತದೆ. ಮಾತೃಭಾಷೆ ಕಲಿಕೆಗೆ ಅನುಕೂಲವಾಗುವಂತೆ ಹಿಂದಿ, ಇಂಗ್ಲಿಷ್, ತಮಿಳು, ಕನ್ನಡ, ಬೆಂಗಾಲಿ, ಪಂಜಾಬಿ ಮತ್ತು 6 ಇತರ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿರುತ್ತದೆ.

10,000 ಗಂಟೆಗಳಿಗಿಂತ ಹೆಚ್ಚು ಆಡಿಯೋ-ದೃಶ್ಯ ಮತ್ತು ಇಂಟರ್ಫೇಸ್‌ ವಿಷಯಗಳ ಮೂಲಕ ಮಾಹಿತಿ ನೀಡಲಾಗುತ್ತದೆ. ಫಸ್ಟ್ ಇನ್ ಕ್ಲಾಸ್ ಪ್ಲಾಟ್‌ಫಾರ್ಮ್ ಮೂಲಕ ಸಾಂಸ್ಕೃತಿಕ ಕಲಿಕೆ, ಭಾಷಾ ಕಲಿಕೆ, ಭಾಷಾ ತರಬೇತಿ ಮತ್ತು ಆಧ್ಯಾತ್ಮಿಕ ಕಲಿಕೆ ಸಹ ಲಭ್ಯವಿರುತ್ತವೆ. ಉನ್ನತ ಶಿಕ್ಷಣಕ್ಕಾಗಿ, ಪ್ರವೇಶ ಪರೀಕ್ಷೆಯ ಮಾಡ್ಯೂಲ್‌ಗಳು ಮತ್ತು ಯುಪಿಎಸ್‌ಸಿ, ಕಾನೂನು ಹಾಗೂ ಎಂಜಿನಿಯರಿಂಗ್‌ನಲ್ಲಿ ಕೂಡ ವಿಶೇಷ ತರಬೇತಿಯನ್ನು ನೀಡಲಾಗುತ್ತದೆ.

RILM ಅಧ್ಯಕ್ಷ ಕಮಲ್ ಸಾಂಘ್ವಿ ಮತ್ತು ಐಟಿವಿ ನೆಟ್‌ವರ್ಕ್ ಸಂಸ್ಥಾಪಕ ಕಾರ್ತಿಕೇಯ ಶರ್ಮಾ ನಡುವೆ ವರ್ಚುವಲ್ ಸಮಾರಂಭದ ಮೂಲಕ MOUಗೆ ಸಹಿ ಹಾಕಲಾಯಿತು.

ಡಿಜಿಟಲ್ ಕಲಿಕೆಯನ್ನು ಉತ್ತೇಜಿಸಲು ಸರ್ಕಾರ ಉತ್ಸುಕವಾಗಿದೆ. ಈ ಸಂದರ್ಭದಲ್ಲಿ ಇ-ಲರ್ನಿಂಗ್ ವಿಷಯವನ್ನು ಒದಗಿಸಲು RILM ಈಗಾಗಲೇ NCERT ಯೊಂದಿಗೆ MOUಗೆ ಸಹಿ ಹಾಕಿದೆ. ಈ ಹೊಸ ವರ್ಷದಲ್ಲಿ ವೃತ್ತಿಪರ ತರಬೇತಿಯ ಮೂಲಕ ಜನರ ಆದ್ಯತೆಗಳಿಗೆ ಅನುಗುಣವಾಗಿ ವೃತ್ತಿಪರ ಶಿಕ್ಷಣಕ್ಕಾಗಿ ವಿಷಯವನ್ನು ರಚಿಸುವುದಾಗಿ   RILM ಅಧ್ಯಕ್ಷ ಕಮಲ್ ಸಾಂಘ್ವಿ ಹೇಳಿದರು. “ಈ ಕೋರ್ಸ್‌ವರ್ಕ್  ಸಿಬಿಎಸ್‌ಇ, ಎನ್‌ಸಿಇಆರ್‌ಟಿ ಪಠ್ಯಕ್ರಮಕ್ಕೆ ಅನುಗುಣವಾಗಿ ದೇಶದ ಕೆಲವು ಅತ್ಯುತ್ತಮ ಶಿಕ್ಷಣತಜ್ಞರು ರಚಿಸಿದ್ದಾರೆ. ನಿರ್ದಿಷ್ಟವಾಗಿ, ಹಿಂದಿ, ಇಂಗ್ಲಿಷ್ ಮತ್ತು ಅನೇಕ ಪ್ರಾದೇಶಿಕ ಭಾಷೆಗಳಲ್ಲಿ ಸಮಗ್ರತೆ ಮತ್ತು ಮಾತೃಭಾಷೆ ಕಲಿಕೆಯನ್ನು ಖಚಿತಪಡಿಸಿಕೊಳ್ಳಲು ಇದನ್ನು ನೀಡಲಾಗುತ್ತಿದೆ ಎಂದರು.

ಶಿಕ್ಷಣ ಕೇತ್ರದಲ್ಲಿರುವ ಬೋಧನಾ ವಿಧಾನಗಳನ್ನು ಬಳಸಿಕೊಂಡು ಪಠ್ಯಕ್ರಮ ರಚಿಸಲು ಹಲವು ವರ್ಷಗಳಿಂದ ಸಂಶೋಧನೆ ಮತ್ತು ಕಠಿಣ ಪರಿಶ್ರಮದ ಫಲವಾಗಿ ಇಂದಿನ ಈ ಯೋಜನೆ ಸಿದ್ಧವಾಗಿದೆ ಎಂದು ʻಐಟಿವಿ ನೆಟ್‌ವರ್ಕ್‌ ಸಂಸ್ಥಾಪಕ ಕಾರ್ತಿಕೇಯ ಶರ್ಮಾʼ ತಿಳಿಸಿದ್ರು. ಇದು ವಿದ್ಯಾರ್ಥಿಗಳಿಗೆ ಕಲಿಯಲು ಸಂಪೂರ್ಣ ಸಹಕಾರಿಯಾಗುತ್ತದೆ ಎಂದು ತಿಳಿಸಿದ್ರು.

ಪ್ರತಿಯೊಬ್ಬ ವಿದ್ಯಾರ್ಥಿಯೂ ಕಲಿಕೆಯಲ್ಲಿ ತನ್ನದೇ ಆದ ಸಾಮರ್ಥ್ಯ ಮತ್ತು ವಿಶೇಷತೆಯನ್ನು ಹೊಂದಿರುತ್ತಾರೆ.  ಕಲಿಕೆ ಹಾಗೂ ಯೋಚನಾ ಲಹರಿಯಲ್ಲಿ ಅರ್ಹತೆ ಹೊಂದಿರುತ್ತಾನೆ. ಈ ದೃಷ್ಟಿಕೋನದಿಂದ ಫಸ್ನಟ್ಮ್ಮ‌ ಇನ್‌ ಕ್ಲಾಸ್‌ ಹಿಟ್ಟಿದೆ. ನಮ್ಮ ಪಠ್ಯಕ್ರಮವು ಹೊಸ ಡಿಜಿಟಲ್ ಕಲಿಕೆಯ ತಂತ್ರಗಳ ಬಗ್ಗೆ ವ್ಯಾಪಕವಾದ ಸಂಶೋಧನೆಯ ಫಲಿತಾಂಶವನ್ನು ಹೊಂದಿದೆ.  ಅನುಭವಿ ಶಿಕ್ಷಕರು ಹೆಚ್ಚು ಗಮನವನ್ನು ಹರಿಸಿ ಪಠ್ಯಕ್ರಮವನ್ನು ಎಚ್ಚರಿಕೆಯಿಂದ ರಚಿಸಿದ್ದಾರೆ ಎಂದು ಕಾರ್ತಿಕೇಯ ಶರ್ಮಾ ತಿಳಿಸಿದ್ದಾರೆ.

ಹುತಾತ್ಮರ ಮಕ್ಕಳು, ಸಶಸ್ತ್ರ ಪಡೆಗಳ ಮಕ್ಕಳು, ಕರೋನಾ ಯೋಧರು ಮತ್ತು ದೇಶಕ್ಕಾಗಿ ತ್ಯಾಗ ಮಾಡಿದವರ ಮಕ್ಕಳ ಜವಾಬ್ದಾರಿಯನ್ನು ನಾವು ಹೊತ್ತಿದ್ದೇವೆ.  ಅವರ ಮಕ್ಕಳಿಗೆ ಉಜ್ವಲ ಭವಿಷ್ಯವನ್ನು ನೀಡಲು ನಾವು ಸಹಾಯ ಮಾಡಬೇಕು ಎಂದು  “ಫಸ್ಟ್ ಇನ್ ಕ್ಲಾಸ್ ಸಂಸ್ಥಾಪಕರಾದ ಶ್ರೀಮತಿ ಐಶ್ವರ್ಯಾ ಶರ್ಮಾ ಹೇಳಿದರು.

“75ನೇ ಸ್ವಾತಂತ್ರ್ಯದ  ವಾರ್ಷಿಕೋತ್ಸವದ ಸಂದರ್ಭದ ಅನುಗುಣವಾಗಿ ಇದು ನಮ್ಮ ಹುತಾತ್ಮ ಯೋಧರಿಗೆ ನಾವು ನೀಡುತ್ತಿರುವ ಗೌರವ. ನಾವು 10 ವರ್ಷಗಳಿಂದ  ಇ-ಲರ್ನಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಆಡಿಯೋ-ವಿಡಿಯೋ ಪಠ್ಯ ವಿಷಯ ಇದುವರೆಗೂ ಸಾವಿರಾರು ಶಾಲೆಗಳನ್ನು ತಲುಪಿದೆ ಎಂದು ರೋಟರಿ ಅಂತರಾಷ್ಟ್ರೀಯ ಅಧ್ಯಕ್ಷ ಶೇಖರ್ ಮೆಹ್ತಾ ಹೇಳಿದರು.

Share Post