CrimeNational

Rape attempt; 7 ವರ್ಷದ ಬಾಲಕಿ ಮೇಲೆ ಧರ್ಮಗುರು ಅತ್ಯಾಚಾರಕ್ಕೆ ಯತ್ನ!

ಕಾನ್ಪುರ (Uttarpradesh); 70 ವರ್ಷದ ವೃದ್ಧ ಧರ್ಮಗುರುವೊಬ್ಬ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸುತ್ತಿದ್ದಾಗ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ.. ಆಗಸ್ಟ್‌ 9ರಂದು ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ಪೈಶಾಚಿಕ ಕೃತ್ಯ ನಡೆದಿದೆ.. ಏಳು ವರ್ಷದ ಬಾಲಕಿಗೆ ಚಾಕೋಲೇಟ್‌ ಕೊಡುವ ಆಮಿಷವೊಡ್ಡಿರುವ ಆಸಾಮಿ, ಪುಟ್ಟ ಬಾಲಕಿ ಮೇಲೆ ಅತ್ಯಾಚಾರಕ್ಕೆ ಪ್ರಯತ್ನ ಮಾಡಿದ್ದಾನೆ.. ಅನುಮಾನದಿಂದ ನೋಡಿದ್ದ ವ್ಯಕ್ತಿಯಿಂದಾಗಿ ಈ ಪ್ರಕರಣ ಬೆಳಕಿಗೆ ಬಂದಿದೆ..

ಇದನ್ನೂ ಓದಿ; Pistol lady; ಪಾತ್ರೆಯಲ್ಲ, ಪಿಸ್ತೂಲ್‌ ತೊಳೆಯುತ್ತಾಳೆ ಈ ಮಹಿಳೆ!

ಕಾನ್ಪುರದ ಮಕ್ಬರಾ ಪ್ರದೇಶದಲ್ಲಿ ವಾಸ ಮಾಡುವ ಮೌಲಾನಾ ಮುಖ್ತಾರ್‌ ಎಂಬಾತ ಪುಟ್ಟ ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗುವುದನ್ನು ವ್ಯಕ್ತಿಯೊಬ್ಬ ನೋಡಿದ್ದಾನೆ.. ಆತನಿಗೆ ಅನುಮಾನ ಬಂದು ಪರೀಕ್ಷೆ ಮಾಡಿದ್ದಾನೆ. ಕಿಟಕಿಯಿಂದ ಒಳಗಿನ ದೃಶ್ಯ ನೋಡಿದಾಗ ಆತ ಘಾತಕ್ಕೊಳಗಾಗಿ ಸುತ್ತಮುತ್ತಲಿನ ಜನರನ್ನು ಕರೆದಿದ್ದಾನೆ.. ಎಲ್ಲರೂ ಸೇರೀ ಆರೋಪಿಯನ್ನು ರೆಡ್‌ಹ್ಯಾಂಡಾಗಿ ಹಿಡಿದಿದ್ದಾರೆ.. ಆತನ ಕೃತ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದೆ..

ಇದನ್ನೂ ಓದಿ; Headache; ಕ್ಷಣಗಳಲ್ಲಿ ತಲೆನೋವು ಕಡಿಮೆಯಾಗಬೇಕಾ..?

ಬೆತ್ತಲೆ ಸ್ಥಿತಿಯಲ್ಲಿದ್ದ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲು ಸಿದ್ಧತೆ ನಡೆಸಲಾಗಿತ್ತು.. ಆದ್ರೆ ಅಷ್ಟರಲ್ಲಾಗಲೇ ಆತ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ..

Share Post