CrimePolitics

ಮುಡಾ ಹಗರಣ; ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲರಿಂದ ಮೂರನೇ ನೋಟಿಸ್‌

ಬೆಂಗಳೂರು; ಮುಡಾದಲ್ಲಿ ಬದಲಿ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಹಿನ್ನೆಲೆಯಲ್ಲಿ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯಗೆ ನೋಟಿಸ್‌ ಜಾರಿ ಮಾಡಿದ್ದರು.. ಆದ್ರೆ ಸರ್ಕಾರ ನೋಟಿಸ್‌ ಹಿಂಪಡೆಯುವಂತೆ ಸೂಚನೆ ನೀಡಿತ್ತು.. ಇದಾದ ಮೇಲೂ ರಾಜ್ಯಪಾಲರು ಮೂರನೇ ಬಾರಿ ನೋಟಿಸ್‌ ಜಾರಿ ಮಾಡಿದ್ದಾರೆ.. ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಬಗ್ಗೆ ಈ ನೋಟೀಸ್‌ ಜಾರಿ ಮಾಡಿ, ಸರ್ಕಾರ ಸಮಜಾಯಿಷಿ ಕೇಳಲಾಗಿತ್ತು..

ಇದನ್ನೂ ಓದಿ; ಕುಡಿದುಬಂದು ತಾಯಿಯ ಮೇಲೇ ಅತ್ಯಾಚಾರ ಮಾಡಿದ ಪಾಪಿ ಮಗ!

ಜುಲೈ 26 ರಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಅವರು ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ದೂರು ನೀಡಿ, ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಕೋರಿದ್ದರು.. ಅಂದು ಸಂಜೆಯೇ ರಾಜ್ಯಪಾಲರು ಸಿಎಂ ನೋಟಿಸ್‌ ಜಾರಿ ಮಾಡಿದ್ದರು.. ಇದಾದ ಮೇಲೆ ನಡೆದ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ನೋಟಿಸ್‌ ಹಿಂಪಡೆಯುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸುವ ಬಗ್ಗೆ ತೀರ್ಮಾನಿಸಲಾಗಿತ್ತು..

ಇದನ್ನೂ ಓದಿ; ಮಗಳ ಮದುವೆಗೆ ಕೂಡಿಟ್ಟ ಹಣದೊಂದಿಗೆ ಪ್ರಿಯಕರ ಜೊತೆ ತಾಯಿ ಎಸ್ಕೇಪ್‌!

ಅದಾದ ಮೇಲೆ ರಾಜ್ಯಪಾಲರು ಎರಡನೇ ನೋಟಿಸ್‌ ಜಾರಿ ಮಾಡಿದ್ದರು.. ಈಗ ಆಗಸ್ಟ್‌ 5ರಂದು ಮತ್ತೊಂದು ನೋಟಿಸ್‌ ನೀಡಲಾಗಿದೆ.. ಸಂಪುಟ ನಿರ್ಣಯದ ಹಿನ್ನೆಲೆಯಲ್ಲಿ ಮತ್ತೆ ಕೇಸ್‌ನಲ್ಲಿ ಕ್ಲಾರಿಫಿಕೇಷನ್ ಕೊಡುವಂತೆ ಈ ನೋಟೀಸ್ ಜಾರಿ ಮಾಡಲಾಗಿದೆ..

Share Post