ಪತಿ ಬೈದಿದ್ದಕ್ಕೆ ಮನೆ ಮೇಲಿಂದ ಹಾರಿ ಪತ್ನಿ ಆತ್ಮಹತ್ಯೆ!
ಇಂದೋರ್; ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಅಂತಾರೆ.. ಆದ್ರೆ ಇಲ್ಲಿ ಗಂಡ-ಹೆಂಡತಿ ನಡುವೆ ಜಗಳ ನಡೆದಿದ್ದು, ಈ ವೇಳೆ ಪತ್ನಿ ಮನೆ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.. ಮಧ್ಯಪ್ರದೇಶದ ಇಂದೋರ್ನಲ್ಲಿ ಈ ಘಟನೆ ನಡೆದಿದೆ..
ಇದನ್ನೂ ಓದಿ; ಮುಡಾ ಹಗರಣ; ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲರಿಂದ ಮೂರನೇ ನೋಟಿಸ್
ಇಡಬ್ಲ್ಯೂಎಸ್ ಕ್ವಾರ್ಟರ್ಸ್ ನಿವಾಸಿ ಅಂಗೂರಿ ಬಾಯಿ ಎಂಬ ಮಹಿಳೆಯೇ ಆತ್ಮಹತ್ಯೆ ಮಾಡಿಕೊಂಡವಳು.. 27 ವರ್ಷ ಈ ಮಹಿಳೆ ಜೊತೆ ಗಂಡ ಜಗಳವಾಡಿದ್ದಾನೆ.. ಗಂಡ ಬೈದ ಅನ್ನೋದು ಕಾರಣಕ್ಕೆ ತಾನು ವಾಸವಿದ್ದ ಕಟ್ಟಡದ ಮೂರನೇ ಮಹಡಿಯಿಂದ ಜಿಗಿದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.. ಇದರ ವಿಡಿಯೋ ರೆಕಾರ್ಡ್ ಆಗಿದ್ದು ಎಲ್ಲೆಡೆ ವೈರಲ್ ಆಗುತ್ತಿದೆ..
ಇದನ್ನೂ ಓದಿ; ಕುಡಿದುಬಂದು ತಾಯಿಯ ಮೇಲೇ ಅತ್ಯಾಚಾರ ಮಾಡಿದ ಪಾಪಿ ಮಗ!
ಇಂದೋರ್ನ ಲಸುಡಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಗಾಪುರ್ ಟೌನ್ಶಿಪ್ನಲ್ಲಿ ಈ ಘಟನೆ ನಡೆದಿದೆ.. ಮಹಿಳೆಯ ಪತಿ ದೈಹಿಕವಾಗಿ, ಮಾನಸಿಕವಾಗಿ ದಿನವೂ ಕಿರುಕುಳ ನೀಡುತ್ತಿದ್ದನಂತೆ.. ಇದರಿಂದ ಮನನೊಂದ ಮಹಿಳೆ ಮನೆಯ ಟೆರೇಸ್ಗೆ ಹೋಗಿ ಅಲ್ಲಿಂದ ಕೆಳಗೆ ಹಾರಿದ್ದಾಳೆ.. ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪತಿ ರಾಹುಲ್ ಎಂಬಾತ ಈಕೆಯ ಗಂಡ.. ಇವರಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ; ನಿಮ್ಮ ಸಂಪಾದನೆ 25 ಸಾವಿರಕ್ಕಿಂತ ಕಡಿಮೆ ಇದ್ದರೂ ಕೋಟ್ಯಧಿಪತಿಗಳಾಗಬಹುದು..!