CrimeDistricts

ಕುಡಿದುಬಂದು ತಾಯಿಯ ಮೇಲೇ ಅತ್ಯಾಚಾರ ಮಾಡಿದ ಪಾಪಿ ಮಗ!

ಚಿಕ್ಕಬಳ್ಳಾಪುರ; ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕಿನಲ್ಲಿ ಪೈಶಾಚಿಕ ಕೃತ್ಯವೊಂದು ನಡೆದಿದೆ.. ರಾತ್ರಿ ಕಂಠಪೂರ್ತಿ ಕುಡಿದುಬಂದಿದ್ದ ಮಗನೇ ತಾಯಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.. ಗುಡಿಬಂಡೆ ತಾಲ್ಲೂಕಿನ ಉಲ್ಲೋಡು ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಚಿನ್ನಹಳ್ಳಿ ಗ್ರಾಮದಲ್ಲಿ ಇಂತಹದ್ದೊಂದು ಅಮಾನವೀಯ ಘಟನೆ ನಡೆದಿದೆ..

ಇದನ್ನೂ ಓದಿ; ನಿಮ್ಮ ಸಂಪಾದನೆ 25 ಸಾವಿರಕ್ಕಿಂತ ಕಡಿಮೆ ಇದ್ದರೂ ಕೋಟ್ಯಧಿಪತಿಗಳಾಗಬಹುದು..!

ರಾತ್ರಿ ವಿಪರೀತ ಕುಡಿದು ಬಂದಿದ್ದ ಮಗ, ತಂದೆ-ತಾಯಿ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾನೆ.. ನಂತರ ಬಲವಂತವಾಗಿ ತಾಯಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.. ಆಮೇಲೆ ಇಬ್ಬರನ್ನೂ ಮನೆ ಹಿಂಭಾಗದ ತಿಪ್ಪೆಗುಂಡಿಗೆ ಎಸೆದು ಪರಾರಿಯಾಗಿದ್ದಾನೆ.. ಅಕ್ಕಪಕ್ಕದವರು ಇದನ್ನು ನೋಡಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ..

ಇದನ್ನೂ ಓದಿ; ಬೈಕ್‌ಗೆ ಸರ್ಕಾರಿ ಬಸ್‌ ಡಿಕ್ಕಿ; ತುಮಕೂರಿನಲ್ಲಿ ವ್ಯಕ್ತಿ ಸಾವು!

ಪೊಲೀಸರು ಸ್ಥಳಕ್ಕೆ ಬಂದು ಮಹಿಳೆಯನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.. ಪಾಪಿ ಮಗ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ..

 

Share Post