CrimeInternational

ಬ್ರಿಡ್ಜ್‌ ಮೇಲಿಂದ ಬಿದ್ದ ಕಾರು; ಮೂವರು ಮಹಿಳೆಯರ ದುರ್ಮರಣ

ಸೌತ್‌ ಕೆರೊಲಿನಾ;  ಅತಿ ವೇಗ ತಿಥಿ ಬೇಗ ಅನ್ನೋ ಮಾತೊಂದಿದೆ.. ಅದಕ್ಕೊಂದು ಉದಾಹರಣೆಯೇ ಈ ಘಟನೆ.. ಕಾರಿನ ಚಾಲಕನ ಅತಿವೇಗದ ಚಾಲನೆಯಿಂದಾಗಿ ಮೂವರು ಮಹಿಳೆಯರು ಪ್ರಾಣಕಳೆದುಕೊಂಡಿದ್ದಾರೆ.. ಬ್ರಿಡ್ಜ್‌ ಮೇಲೆ ಕಾರಿನ ಚಾಲಕ ವೇಗವಾಗಿ ಕಾರು ಚಾಲನೆ ಮಾಡಿದ್ದು, ಅದು ನಿಯಂತ್ರಣ ತಪ್ಪಿ 20 ಅಡಿ ಆಳಕ್ಕೆ ಉರುಳಿದಿದೆ..

ಅಮೆರಿಕದ ದಕ್ಷಿಣ ಕೆರೊಲಿನಾ ರಾಜ್ಯದ ಗ್ರೀನ್‌ ವಿಲ್ಲೆ ಕೌಂಟಿಯಲ್ಲಿ ಈ ದುರ್ಘಟನೆ ನಡೆದಿದ್ದು, ಭಾರತೀಯ ಮೂಲದ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ.. ಗುಜರಾತ್‌ ನ ಆನಂದ್‌ ಜಿಲ್ಲೆಯ ರೇಖಾಬೆನ್ ಪಟೇಲ್, ಸಂಗೀತಾಬೆನ್ ಪಟೇಲ್ ಮತ್ತು ಮನೀಶಾಬೆನ್ ಪಟೇಲ್ ಎಂಬುವವರೇ ಸಾವನ್ನಪ್ಪಿದ ಮಹಿಳೆಯರು.. ಎಸ್‌ಯುವಿ ಕಾರಿನ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ..

ಸೇತುವೆ ಮೇಲಿನ ನಾಲ್ಕು ಲೇನ್‌ ರಸ್ತೆಗಳನ್ನು ದಾಟಿ 20 ಅಡಿ ಆಳಕ್ಕೆ ಕಾರುಬಿದ್ದಿದೆ.. ಕಾರಿನಲ್ಲಿ ಮೂವರು ಮಹಿಳೆಯರು ಹಾಗೂ ಡ್ರೈವರ್‌ ಇದ್ದರು.. ಮೂವರು ಮಹಿಳೆಯರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.. ಡ್ರೈವರ್‌ ಮಾತ್ರ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ.. ನಿಗದಿಪಡಿಸಿದ್ದ ವೇಗಕ್ಕಿಂತ ಅತಿವೇಗವಾಗಿ ಕಾರು ಚಾಲನೆ ಮಾಡಿದ್ದೇ ದುರಂತಕ್ಕೆ ಕಾರಣ ಎಂದು ತಿಳಿದುಬಂದಿದೆ..

Share Post