ಒಂದು ಸಣ್ಣ ರಕ್ತ ಪರೀಕ್ಷೆಯಿಂದ ಪುರುಷರ ಬಂಜೆತನ ಗುರುತಿಸಬಹುದು!
ಬೆಂಗಳೂರು; ವರ್ಷದಿಂದ ವರ್ಷಕ್ಕೆ ನಮ್ಮ ಜೀವನ ಶೈಲಿ ಸಾಕಷ್ಟು ಬದಲಾಗುತ್ತಿದೆ.. ಆಹಾರ ಪದ್ಧತಿಗಳು ಕೂಡಾ ತುಂಬಾನೇ ಬದಲಾಗಿವೆ.. ಜಂಕ್ ಫುಡ್ ಹೆಚ್ಚು ತಿನ್ನುತ್ತಿದ್ದೇವೆ.. ಇದರ ಜೊತೆಗೆ ಒತ್ತಡದಲ್ಲಿ ಜೀವನ ಸಾಗಿಸುತ್ತಿದ್ದೇವೆ.. ಇದರಿಂದಾಗಿ ಪುರುಷರಲ್ಲಿ ಬಂಜೆತನ ಹೆಚ್ಚಾಗುತ್ತಿದೆ.. ಮದುವೆಯಾಗಿ ದಶಕ ಕಳೆದರೂ ಕೆಲವರಿಗೆ ಮಕ್ಕಳಾಗುತ್ತಿಲ್ಲ.. ಮಹಿಳೆಯರಿಗಿಂತ ಹೆಚ್ಚಾಗಿ ಗಂಡಸರು ಹೆಚ್ಚು ಬಂಜೆತನ ಅನುಭವಿಸುತ್ತಿದ್ದಾರೆ.. ನಿದ್ರೆಯ ಕೊರರೆ, ಗ್ಯಾಜೆಟ್ ವಿಪರೀತ ಬಳಕೆ, ಸಮಯಕ್ಕೆ ಸರಿಯಾಗಿ ಊಟ ಮಾಡದೇ ಇರುವುದು, ಅನಾರೋಗ್ಯಕರ ಆಹಾರ ಸೇವನೆ ಮಾಡುವುದು ಇದಕ್ಕೆ ಮುಖ್ಯ ಕಾರಣ..
ಇದನ್ನೂ ಓದಿ; ಮಹಿಳೆ ಪ್ರಾಣ ತೆಗೆದು ಅಪ್ರಾಪ್ತ ಕಾರು ಚಾಲಕ; ಮಹಿಳೆಯ ಮಗಳೂ ಗಂಭೀರ!
ಮಕ್ಕಳಿಲ್ಲದ ದಂಪತಿಗಳು ವೈದ್ಯರ ಬಳಿಗೆ ಹೋದರೆ, ಮೊದಲು ಬರೀ ಮಹಿಳೆಯರನ್ನು ಮಾತ್ರ ಪರೀಕ್ಷೆ ಮಾಡುತ್ತಿದ್ದರು.. ಮಕ್ಕಳಾಗದ ಮಹಿಳೆಯರು ಮಾತ್ರವೇ ಆಸ್ಪತ್ರೆಗೆ ಹೋಗುತ್ತಿದ್ದರು.. ಆದ್ರೆ ಈಗ ಕಾಲ ಬದಲಾಗಿದೆ.. ವೈದ್ಯರು ಈಗ ಪುರುಷರು ಮತ್ತು ಮಹಿಳೆಯರಿಬ್ಬರನ್ನೂ ಪರೀಕ್ಷೆಗೊಳಪಡಿಸುತ್ತಾರೆ.. ಪುರುಷರಲ್ಲಿ ಫಲವತ್ತತೆಯನ್ನು ಪರೀಕ್ಷಿಸಲು ಪ್ರಸ್ತುತ ಲಭ್ಯವಿರುವ ವಿಧಾನವೆಂದರೆ ವೀರ್ಯ ಪರೀಕ್ಷೆ. ಇಲ್ಲಿಯವರೆಗೆ, ಪುರುಷ ಫಲವತ್ತತೆಯನ್ನು ನಿರ್ಧರಿಸಲು ಈ ಪರೀಕ್ಷೆಯನ್ನು ಬಳಸಲಾಗುತ್ತಿದೆ.. ಆದರೆ ಇದು ಸ್ವಲ್ಪ ಕಷ್ಟದಾಯಯ ಹಾಗೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.. ಅಲ್ಲದೆ, ಸಣ್ಣ ರಕ್ತ ಪರೀಕ್ಷೆಯ ಮೂಲಕ ಇದನ್ನು ಪತ್ತೆಹಚ್ಚಲು ಅವಕಾಶವಿದ್ದರೆ?. ಹೌದು, ಇದೀಗ ಪುರುಷರಿಗೆ ಮಕ್ಕಳಾಗುತ್ತವೋ, ಇಲ್ಲವೋ ಎಂಬುದನ್ನು ಪರೀಕ್ಷೆ ಮಾಡಲು ಈಗ ಸಣ್ಣ ಪರೀಕ್ಷೆ ಸಾಕೆಂದು ಸಂಶೋಧಕರು ಹೇಳುತ್ತಿದ್ದಾರೆ..
ಇದನ್ನೂ ಓದಿ; ಈ ವಾರ ಭವಿಷ್ಯ ಹೇಗಿದೆ..?; ಯಾವ ರಾಶಿಯವರಿಗೆ ಲಾಭ, ಯಾರಿಗೆ ತೊಂದರೆ..?
ಇದಕ್ಕಾಗಿ ಕೃತಕ ಬುದ್ಧಿಮತ್ತೆ ಮಾದರಿಯನ್ನು ಅಭಿವೃದ್ಧಿಪಡಿಸಲಾಗಿದೆ. ಜಪಾನ್‌ನ ತೊಹೊ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧಕರು ಇದನ್ನು ಕಂಡುಹಿಡಿದಿದ್ದಾರೆ.. ಒಂದು ಸಣ್ಣ ರಕ್ತ ಪರೀಕ್ಷೆ ಮಾಡುವುದರ ಮೂಲಕ ಪುರುಷರ ಬಂಜೆತನದ ಸಮಸ್ಯೆ ಕಂಡುಹಿಡಿಯಬಹುದು. ರಕ್ತದಲ್ಲಿನ FSH, LH, PRL, ಟೋಟಲ್ ಟೆಸ್ಟೋಸ್ಟೆರಾನ್ ಮತ್ತು E2 ನಂತಹ ವಿವಿಧ ಹಾರ್ಮೋನುಗಳ ಮಟ್ಟವನ್ನು ವಿಶ್ಲೇಷಿಸಲಾಗುತ್ತದೆ.. ಈ ಮೂಲಕ ಪುರುಷ ಬಂಜೆತನವನ್ನು ಶೇಕಡಾ 74 ರಷ್ಟು ನಿಖರವಾಗಿ ಹೇಳಲಾಗುತ್ತದೆ.. ಕೆಲವು ಪುರುಷರ ಅಜೋಸ್ಪೆರ್ಮಿಯಾ ಸಮಸ್ಯೆಯನ್ನು ಶೇಕಡಾ 100 ರಷ್ಟು ಕಂಡುಹಿಡಿಯಬಹುದು ಎಂದು ಸಂಶೋಧಕರು ಹೇಳುತ್ತಾರೆ.
ಇದನ್ನೂ ಓದಿ; ದೇವಸ್ಥಾನದ ಗೋಡೆ ಕುಸಿದು 9 ಮಕ್ಕಳು ದಾರುಣ ಸಾವು!
3,662 ರೋಗಿಗಳ ವೈದ್ಯಕೀಯ ವರದಿಗಳನ್ನು ಸಂಶೋಧನೆಗೆ ಪರಿಗಣಿಸಲಾಗಿದೆ.. ಈ ವರದಿಯನ್ನು ಆಧರಿಸಿ ಈ ಎಐ ಮಾದರಿಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಅಸೋಸಿಯೇಟ್ ಪ್ರೊಫೆಸರ್ ಹಿಡೆಯುಕಿ ಕೊಬಯಾಶಿ ಹೇಳಿದ್ದಾರೆ. ಈ AI ಮಾದರಿಯನ್ನು 2021 ಮತ್ತು 2022ರಲ್ಲಿ ಅನೇಕ ಜನರ ಮೇಲೆ ಪರೀಕ್ಷಿಸಿದಾಗ, ಫಲಿತಾಂಶಗಳು ಬಂಜೆತನಕ್ಕೆ 68 ಪ್ರತಿಶತ ನಿಖರವಾಗಿ ಮತ್ತು ಅಜೂಸ್ಪೆರ್ಮಿಯಾಕ್ಕೆ 100 ಪ್ರತಿಶತ ನಿಖರವಾಗಿವೆ.