ಭಾರತದಲ್ಲಿ ಕೊರೊನಾ ಮೂರನೇ ಅಲೆ ಪ್ರಾರಂಭ; ಎನ್‌ಟಿಎಜಿಐ ಮುಖ್ಯಸ್ಥ ಡಾ.ಅರೋರ
ನವದೆಹಲಿ: ಭಾರತದಲ್ಲಿ ಕೊರೊನಾ ಮೂರನೇ ಅಲೆ ಎಂಟ್ರಿಯಾಗಿ ಎಂದು ಎನ್‌ಟಿಎಜಿಐ ಮುಖ್ಯಸ್ಥ ಡಾ.ಅರೋರ ಹೇಳಿದ್ದಾರೆ. ಕೊರೊನಾ ಹಾಗೂ ಒಮಿಕ್ರಾನ್ ಭಾರತದಲ್ಲಿ ಹೆಚ್ಚು ಹರಡುತ್ತಿದೆ. ಹೀಗಾಗಿ ಭಾರತದಲ್ಲಿ ಕೊರೊನಾ ಮೂರನೇ ಅಲೆ ಲಗ್ಗೆ ಇಟ್ಟಿದೆ ಎಂದು ಹೇಳಬಹುದು ಎಂದು ಹೇಳಿದ್ದಾರೆ.
ಒಮಿಕ್ರಾನ್ ಲಕ್ಷಣ ಇರುವವರಿಗೆ ಜಿನೋಮಿಕ್ ಸೀಕ್ವೆನ್ಸಿಂಗ್ ಟೆಸ್ಟ್ ಮಾಡಲಾಗುತ್ತಿದ್ದು ಕಳೆದ ವಾರ ಇದರ ಪಾಸಿಟಿವಿ ದರ ಶೇ ೧೨ರಷ್ಟಿತ್ತು. ಆದ್ರೆ ಈಗ ಅದು ಶೇಕಡಾ ೨೮ ರಷ್ಟಾಗಿದೆ ಎಂದು ಡಾ.ಅರೋರ ಹೇಳಿದ್ದಾರೆ. ದೆಹಲಿ, ಕೋಲ್ಕತ್ತಾ, ಮುಂಬೈಗಳಲ್ಲಿ ಕೊರೊನಾ ಹೆಚ್ಚಾಗುತ್ತಿದೆ. ಈ ನಡುವೆ ಒಮಿಕ್ರಾನ್ ಕೇಸ್‌ಗಳೂ ಜಾಸ್ತಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ ಭಾರತದಲ್ಲಿ ಕೊರೊನಾ ೩ನೇ ಅಲೆ ಆರಂಭವಾಗಿದೆ ಎಂದು ಹೇಳಬಹುದು ಅಂತ ಡಾ.ಅರೋರ ಹೇಳಿದ್ದಾರೆ.
ಇನ್ನು ಇದೇ ವೇಳೆ ವಿಶ್ವ ಆರೋಗ್ಯ ಸಂಸ್ಥೆ ವೈದ್ಯರು ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಒಮಿಕ್ರಾನ್ ಬಗ್ಗೆ ನಿರ್ಲಕ್ಷ್ಯ ಬೇಡ. ಎಚ್ಚರಿಕೆಯಿಂದ ಇರದೇ ಹೋದರೆ ಒಮಿಕ್ರಾನ್‌ನಿಂದಲೂ ತೊಂದರೆಯಾಗುವ ಅಪಾಯವಿದೆ. ಹೀಗಾಗಿ ಜನರು ಎಚ್ಚೆತ್ತುಕೊಳ್ಳಬೇಕು, ಸರ್ಕಾರಗಳೂ ಕೂಡಾ ಒಮಿಕ್ರಾನ್ ಹರಡುವಿಕೆಯನ್ನು ನಿರ್ಲಕ್ಷಿಸಬಾರದು ಎಂದು ಹೇಳಿದ್ದಾರೆ.