CrimeNational

ಮಹಿಳೆ ಪ್ರಾಣ ತೆಗೆದು ಅಪ್ರಾಪ್ತ ಕಾರು ಚಾಲಕ; ಮಹಿಳೆಯ ಮಗಳೂ ಗಂಭೀರ!

ಕಾನ್ಪುರ; ಅಪ್ರಾಪ್ತರ ಕೈಗೆ ಬೈಕ್‌, ಕಾರುಗಳನ್ನು ಕೊಟ್ಟು ಅಪಘಾತಗಳಿಗೆ ದಾರಿ ಮಾಡಿಕೊಡುತ್ತಿದ್ದಾರೆ.. ಕೆಲ ತಿಂಗಳಿಂದೀಚೆಗೆ ಅಪ್ರಾಪ್ತರು ಮಾಡಿದ ಅನಾಹುತದಿಂದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ.. ಹೀಗಿದ್ದರೂ ಕೂಡಾ ಅಪ್ರಾಪ್ತರು ಅವಾಂತರಗಳನ್ನು ಮಾಡುತ್ತಲೇ ಇದ್ದಾರೆ.. ಉತ್ತರ ಪ್ರದೇಶದಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ.. ಅಪ್ರಾಪ್ತ ಬಾಲಕ ಡ್ರೈವಿಂಗ್‌ ಮಾಡುತ್ತಿದ್ದ ಕಾರು ಗುದ್ದಿ ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.. ಉತ್ತರ ಪ್ರದೇಶದ ಕಾನ್ಪುರ ನಗರದ ಸಾಕೇತ್‌ ನಗರ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ..

ಇದನ್ನೂ ಓದಿ; ಈ ವಾರ ಭವಿಷ್ಯ ಹೇಗಿದೆ..?; ಯಾವ ರಾಶಿಯವರಿಗೆ ಲಾಭ, ಯಾರಿಗೆ ತೊಂದರೆ..?

42 ವರ್ಷ ಭಾವನಾ ಮಿಶ್ರಾ ಎಂಬ ಮಹಿಳೆ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಅಪ್ತಾಪ್ತ ಬಾಲಕ ಕಾರು ಓಡಿಸಿಕೊಂಡು ಬಂದು ವೇಗವಾಗಿ ಗುದ್ದಿದ್ದಾನೆ.. ಇದರಿಂದಾಗಿ ಭಾವನಾ ಮಿಶ್ರಾ ಸಾವನ್ನಪ್ಪಿದ್ದಾರೆ.. ಸ್ಕೂಟಿಯಲ್ಲಿ ಹಿಂದೆ ಕುಳಿತಿದ್ದ ಆಕೆಯ ಮಗಳ ಮೇಧವಿ ಮಿಶ್ರಾ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ..

ಇದನ್ನೂ ಓದಿ; ದೇವಸ್ಥಾನದ ಗೋಡೆ ಕುಸಿದು 9 ಮಕ್ಕಳು ದಾರುಣ ಸಾವು!

ಭಾವನಾ ಅವರು ಕ್ಲಿನಿಕ್‌ಗೆ ಹೋಗಿದ್ದರು.. ವೈದ್ಯರ ಬಳಿ ತೋರಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದರು.. ಈ ವೇಳೆ ಈ ದುರ್ಘಟನೆ ನಡೆದಿದೆ.. ಆರೋಪಿ ಬಳಿ ಡ್ರೈವಿಂಗ್‌ ಲೈಸೆನ್ಸ್‌ ಇರಲಿಲ್ಲ. ಆರೋಪಿ ಅಪ್ತಾಪ್ತನಾಗಿದ್ದು, ಸ್ನೇಹಿತರನ್ನು ಕೂರಿಸಿಕೊಂಡು ರಸ್ತೆಯಲ್ಲಿ ಸ್ಟಂಟ್‌ ಮಾಡುತ್ತಿದ್ದ ಎನ್ನಲಾಗಿದೆ.. ಘಟನೆ ಸಂಬಂಧ ಆರೋಪಿಯ ತಂದೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ..

ಇದನ್ನೂ ಓದಿ; ಬ್ಯಾಂಕ್‌ ಕಳುವಿಗೆ ಯತ್ನಿಸಿ ವಿಫಲವಾದ ಮಹಿಳೆ!

Share Post