‘ವಾಲ್ಮೀಕಿ’ ನಿಗಮ ಅಕ್ರಮದಲ್ಲಿ ಸಿದ್ದರಾಮಯ್ಯರ ಸಿಲುಕಿಸುವ ಯತ್ನ ನಡೆಯುತ್ತಿದೆಯೇ..?
ಬೆಂಗಳೂರು; ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ರೂಪಾಯಿ ಮೊತ್ತದ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿಲುಕಿಸಲು ಪ್ರಯತ್ನ ನಡೆಯುತ್ತಿದೆ ಎಂಬ ವಿಚಾರ ಈಗ ದೊಡ್ಡ ರಾಜಕೀಯ ಸಂಚಲನಕ್ಕೆ ಕಾರಣವಾಗುತ್ತಿದೆ.. ಹಗರಣ ಬೆಳಕಿಗೆ ಬಂದಾಗಿನಿಂದಲೂ ಸಿದ್ದರಾಮಯ್ಯ ಅವರು ಕೇಜ್ರಿವಾಲ್, ಸೊರೇನ್ ಬಂಧನದ ವಿಚಾರ ಪ್ರಸ್ತಾಪಿಸುತ್ತಾ ಬಿಜೆಪಿ ಷಡ್ಯಂತ್ರದ ವಿರುದ್ಧ ಮಾತನಾಡುತ್ತಿದ್ದರು.. ಇದೀಗ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿಲುಕಿಸಿ ಅವರ ಬಂಧನಕ್ಕೂ ಸಂಚು ರೂಪಿಸಲಾಗಿತ್ತು ಎಂಬ ಆರೋಪ ಕೇಳಿಬರುತ್ತಿದೆ.. ಪ್ರಕರಣದ ಭಾಗವಾಗಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಇಬ್ಬರು ಅಧಿಕಾರಿಗಳ ವಿರುದ್ಧವೇ ಎಫ್‌ಐಆರ್ ದಾಖಲಾಗಿದ್ದು, ಇದು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ..
ಇದನ್ನೂ ಓದಿ; ದಿನಕ್ಕೆ ಎರಡು ಖರ್ಜೂರ ತಿಂದರೆ ಸಾಕು ಫುಲ್ ಎನರ್ಜಿ ನಿಮ್ಮದಾಗುತ್ತೆ!
ಸಮಾಜಕಲ್ಯಾಣ ಇಲಾಖೆ ಅಪರ ನಿರ್ದೇಶಕ ಕಲ್ಲೇಶ್ ಎಂಬುವವರು ಇಡಿ ಅಧಿಕಾರಿಗಳ ವಿರುದ್ಧ ವಿಲ್ಸನ್ ಗಾರ್ಡ್ನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.. ಪ್ರಕರಣದ ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು, ನನ್ನನ್ನು ವಿಚಾರಣೆಗೆ ಕರೆಸಿದ್ದು ಈ ವೇಳೆ ಶಾಸಕ ನಾಗೇಂದ್ರ ಹಾಗೂ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಹೇಳಿಕೆ ನೀಡುವಂತೆ ಒತ್ತಡ ಹೇರಿದ್ದಾರೆ.. ಬಲವಂತವಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನ ನಡೆಯುತ್ತಿದೆ ಎಂದು ಆರೋಪ ಮಾಡಿ ಈ ದೂರು ದಾಖಲಿಸಿದ್ದಾರೆ.. ಜಾರಿ ನಿರ್ದೇಶನಾಲಯದ ವಿಚಾರಣಾಧಿಕಾರಿಗಳಾದ ಮಿತ್ತಲ್ ಹಾಗು ಕಣ್ಣನ್ ವಿರುದ್ಧ ಈ ದೂರು ದಾಖಲಿಸಲಾಗಿದೆ..
ಇದನ್ನೂ ಓದಿ; ಯಾಕೋ ಗುರಾಯಿಸ್ತೀಯಾ ಅಂದಿದ್ದಕ್ಕೆ ನಡೆದೇ ಹೋಯ್ತು ಕೊಲೆ!
ಜುಲೈ 16ರಂದು ಇಡಿ ಅಧಿಕಾರಿಗಳು ನನ್ನನ್ನು ವಿಚಾರಣೆಗೆ ಕರೆದಿದ್ದರು.. ಈ ವೇಳೆ ವಿಚಾರಣೆ ನಡೆಸಿದ ಮುರಳಿ ಕಣ್ಣನ್ ಹಾಗೂ ಮಿತ್ತಲ್ ಅವರು, ವಾಲ್ಮೀಕಿ ನಿಗಮದ ಎಂಜಿ ರಸ್ತೆ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲು ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ನಾಗೇಂದ್ರ, ಆರ್ಥಿಕ ಇಲಾಖೆ ಸೂಚನೆಯಿತ್ತು ಎಂದು ಬರೆದುಕೊಡುವಂತೆ ನನ್ನ ಮೇಲೆ ಒತ್ತಡ ಹೇರಿದ್ದರು. ಎರಡನೇ ಬಾರಿ ವಿಚಾರಣೆಗೆ ಹೋದಾಗಲೂ ಇದೇ ರೀತಿಯ ಒತ್ತಡ ಹೇರಲಾಯಿತು. ಹೀಗೆ ಬರೆದುಕೊಟ್ಟರೆ ಮಾತ್ರ ನೀನು ಬಚಾವಾಗುತ್ತೀಯ. ಇಲ್ಲದಿದ್ದರೆ ನಿನ್ನನ್ನು ಬಂಧಿಸುತ್ತೇವೆ, 2 ಲಕ್ಷ ಜಾಮೀನೂ ಸಿಗೋದಿಲ್ಲ, ಏಳು ವರ್ಷ ಜೈಲು ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿದರು ಎಂದು ಕಲ್ಲೇಶ್ ಆರೋಪ ಮಾಡಿದ್ದಾರೆ..
ಇದನ್ನೂ ಓದಿ; ಪ್ರತಿ ತಿಂಗಳೂ 10 ಸಾವಿರ ಹೂಡಿಕೆ ಮಾಡಿ 12 ಕೋಟಿ ರೂ. ಗಳಿಸಿ!