ಗಗನಕ್ಕೇರಿದ ತರಕಾರಿ ಬೆಲೆ: ಟೊಮ್ಯಾಟೋ ಕೆಜಿಗೆ 150 ರೂಪಾಯಿ..!
ಬೆಂಗಳೂರು: ಮಳೆಹಾನಿಯಿಂದಾಗಿ ತರಕಾರಿ ಬೆಲೆ ಗಗನಕ್ಕೇರಿದೆ. ಟೊಮ್ಯಾಟೋ ಕೆಜಿಗೆ 150 ರೂಪಾಯಿ ಮುಟ್ಟಿದೆ. ಮಳೆ ಹಾನಿಯಿಂದಾಗಿ ತರಕಾರಿ ಇಳುವರಿ ಕಡಿಮೆಯಾಗಿದೆ. ಹೀಗಾಗಿ ರಾಜ್ಯದಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಕಳೆದ ಒಂದು ತಿಂಗಳಿಂದ ತರಕಾರಿ ಬೆಲೆ ಏರುತ್ತಲೇ ಇದೆ.
ಇನ್ನು ವ್ಯಾಪಾರಿಗಳು ಹೋಲ್ ಸೇಲ್ ದರದ ಮೂರು ಪಟ್ಟು ಹೆಚ್ಚು ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಮಾರುಕಟ್ಟೆಯಲ್ಲಿ 50 ರೂಪಾಯಿಗೆ ಹೋಲ್ ಸೇಲ್ ದರದಲ್ಲಿ ಸಿಕ್ಕರೆ, ಚಿಲ್ಲರೆ ವ್ಯಾಪಾರಿಗಳು 150 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಇನ್ನು ಹೋಲ್ ಸೇಲ್ ದರದಲ್ಲೂ ಸಾಕಷ್ಟು ಏರಿಕೆಯಾಗಿದೆ. ತಿಂಗಳ ಹಿಂದೆ 25 ಕೆಜಿ ಟೊಮ್ಯಾಟೋ ಬಾಕ್ಸ್ ದರ 300 ರೂಪಾಯಿ ಇತ್ತು. ಆದರೆ ಈಗ 1300-1500 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ ಯಾವ ತರಕಾರಿ ಬೆಲೆ ಎಷ್ಟು..? (ಕೆಜಿಗೆ)
ಟೊಮ್ಯಾಟೋ – 150 ರೂ.
ಹುರುಳಿಕಾಯಿ – 108 ರೂ.
ಬದನೆಕಾಯಿ (ಬಿಳಿ) – 108 ರೂ.
ಗುಂಡು ಬದನೆಕಾಯಿ – 73 ರೂ.
ಸೀಮೆ ಬದನೆಕಾಯಿ – 22 ರೂ.
ಹಾಗಲಕಾಯಿ – 62 ರೂ.
ಸೌತೆಕಾಯಿ – 70 ರೂ.
ಸುವರ್ಣಗಡ್ಡೆ – 35 ರೂ.
ಗೋರಿ ಕಾಯಿ – 82 ರೂ.
ಹಸಿ ಮೆಣಸಿನಕಾಯಿ – 60 ರೂ.
ಬಜ್ಜಿ ಮೆಣಸಿನಕಾಯಿ – 65 ರೂ.
ನಾಟಿ ಕ್ಯಾರೆಟ್ – 94 ರೂ.
ಅಲಸಂದೆ – 75 ರೂ.
ಎಲೆ ಕೋಸು – 65 ರೂ.
ಹೂ ಕೋಸು – 60 ರೂ.