ಹಬ್ಬ-ಹರಿದಿನಗಳಲ್ಲಿ ಉಪವಾಸ ಮಾಡಿದರೆ ಕ್ಯಾನ್ಸರ್ ನಮ್ಮತ್ತ ಸುಳಿಯೋದಿಲ್ಲ..!
ಬೆಂಗಳೂರು; ಹಿಂದೂ ಸಂಪ್ರದಾಯದಲ್ಲಿ ಉಪವಾಸ ವ್ರತಗಳು ತುಂಬಾನೇ ಪ್ರಾಮುಖ್ಯತೆ ವಹಿಸುತ್ತವೆ.. ವೈದ್ಯರು ಕೂಡಾ ಆಗಾಗ ಉಪವಾಸ ಕೈಗೊಳ್ಳುವಂತೆ ಸೂಚಿಸುತ್ತಾರೆ.. ನಿಯಮಿತವಾಗಿ ಉಪವಾಸ ಮಾಡುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಅನ್ನೋದು ವೈದ್ಯಕೀಯವಾಗಿಯೂ ಪ್ರೂವ್ ಆಗಿವೆ.. ಇನ್ನು ಹಬ್ಬ ಹರಿದಿನ ಸೇರಿದಂತೆ ನಿಯಮಿತವಾಗಿ ಆಗಾಗ ಉಪವಾಸ ಮಾಡುವುದರಿಂದ ಕ್ಯಾನ್ಸರ್ ಅಪಾಯವನ್ನು ದೂರ ಮಾಡಬಹುದು ಎಂದು ಹಲವು ಅಧ್ಯಯನಗಳು ಹೇಳುತ್ತಿವೆ..
ಇದನ್ನೂ ಓದಿ; ರೀಲ್ಸ್ ಮಾಡುವಾಗ ದುರಂತ; 300 ಅಡಿ ಫಾಲ್ಸ್ಗೆ ಬಿದ್ದು ಯುವತಿ ಸಾವು!
ಇತ್ತೀಚೆಗೆ ಕ್ಯಾನ್ಸರ್ ಕಾಯಿಲೆ ಹೆಚ್ಚಾಗುತ್ತಿದೆ.. ಯಾವುದೇ ಕೆಟ್ಟ ಅಭ್ಯಾಸ ಇಲ್ಲದಿರುವವರಿಗೂ ಕ್ಯಾನ್ಸರ್ ಬರುತ್ತಿದೆ.. ಹೀಗಾಗಿ ಇದಕ್ಕೆ ಕಾರಣಗಳನ್ನು ಹುಡುಕುತ್ತಾ ಹಲವು ಅಧ್ಯಯನಗಳು ನಡೆದಿವೆ.. ಇತ್ತೀಚಿನ ಸಂಶೋಧನೆ ಪ್ರಕಾರ, ಆಗಾಗ ಉಪವಾಸ ಇರುವುದರಿಂದ ಕ್ಯಾನ್ಸರ್ ನಮ್ಮ ದೇಹಕ್ಕೆ ವಕ್ಕರಿಸುವುದನ್ನು ತಡೆಗಟ್ಟಬಹುದು.. ಆಗಾಗ ಉಪವಾಸ ಮಾಡುವುದರಿಂದ ತೂಕ ಕಳೆದುಕೊಳ್ಳುತ್ತೇವೆ.. ಇದರ ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್ ದೇಹದಲ್ಲಿ ಕರಗುತ್ತದೆ.. ಇದರಿಂದಾಗಿ ನಮ್ಮ ಆರೋಗ್ಯ ಮತ್ತಷ್ಟು ಉತ್ತಮವಾಗಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.. ಇದರಿಂದಾಗಿ ಕ್ಯಾನ್ಸರ್ಕಾರಕ ಕಣಗಳು ನಮ್ಮ ದೇಹದಲ್ಲಿ ಬೆಳೆಯದಂತೆ ನಮ್ಮ ದೇಹ ನೋಡಿಕೊಳ್ಳುತ್ತದೆ ಎಂದು ತಜ್ಞರು ಹೇಳುತ್ತಾರೆ..
ಇದನ್ನೂ ಓದಿ; ವೃಷಭ ರಾಶಿಯಲ್ಲಿ ಗುರು ಸಂಚಾರ; ಇತರ ಐದು ರಾಶಿಗಳಿಗೂ ಧನಯೋಗ!
ಉಪವಾಸ ಮಾಡುವುದರಿಂದ ನೈಸರ್ಗಿಕವಾಗಿ ನಮ್ಮ ದೇಹಕ್ಕೆ ರಕ್ಷಣೆ ಸಿಗುತ್ತದೆ.. ಇದರಿಂದಾಗಿ ನಮ್ಮ ದೇಹಕ್ಕೆ ಕ್ಯಾನ್ಸರ್ ವಕ್ಕರಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ.. ನಿಯಮಿತವಾಗಿ ಉಪವಾಸ ಮಾಡುವವರಲ್ಲಿ ಕ್ಯಾನ್ಸರ್ ಅಪಾಯ ಕಡಿಮೆ ಇದೆ ಎಂಬುದು ಅಧ್ಯಯನದಿಂದ ಗೊತ್ತಾಗಿದೆ.. ಇಲಿಗಳ ಮೇಲೆ ಸಂಶೋಧಕರು ಪ್ರಯೋಗ ಮಾಡಿದ್ದು, ಆಗಾಗ ಇಲಿಗಳಿಗೆ ಯಾವುದೇ ಆಹಾರ ಕೊಡದೆ ಉಪವಾಸ ಇರಿಸಲಾಗಿತ್ತು.. ಹಲವು ತಿಂಗಳ ನಂತರ ಪರೀಕ್ಷೆ ಮಾಡಿದಾಗ ನಿಯಮಿತವಾಗಿ ಉಪವಾಸ ಇದ್ದ ಇಲಿಗಳ ದೇಹದ ನೈಸರ್ಗಿಕ ರಕ್ಷಣಾ ವ್ಯವಸ್ಥೆ ಬಲಪಡಿಸಿರುವುದು ಕಂಡುಬಂದಿದೆ.. ಉಪವಾಸ ಮಾಡಿದರೆ ಕ್ಯಾನ್ಸರ್ ಕೋಶಗಳ ಮೇಲೆ ದಾಳಿ ಮಾಡುವ ಶಕ್ತಿ ನಮ್ಮ ದೇಹಕ್ಕೆ ಬರುತ್ತದೆ.. ಇದರಿಂದಾಗಿ ನಮ್ಮ ದೇಹ ಆರೋಗ್ಯವಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ..
ಇದನ್ನೂ ಓದಿ; ಈ ಐದು ರಾಶಿಯವರಿಗೆ ಮಹಾಶಕ್ತಿ ಯೋಗ..!; ಇದು ಬಯಸಿದಷ್ಟು ಗಳಿಸೋ ಸಮಯ!